ವಾಷಿಂಗ್ಟನ್ : ಬರೋಬ್ಬರಿ 18 ಅಡಿ ಉದ್ದದ ಹೆಬ್ಬಾವು ನಾಯಿಗಳಿಂದ ತಪ್ಪಿಸಿಕೊಳ್ಳಲು ಮೇಲ್ಛಾವಣೆ ಏರಿರುವ ವಿಡಿಯೋ ವೈರಲ್ ಆಗಿದೆ. ಅಮೆರಿಕಾದ ಡೆಟ್ರಾಯಿಟ್ ನಗರದಲ್ಲಿ ಈ ಘಟನೆ ನಡೆದಿದ್ದು, ಹೆಬ್ಬಾವು ಸೆರೆ ಹಿಡಿಯುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಸ್ತೆ ಬದಿಯ ಗ್ಯಾರೇಜ್ ಮೇಲೆ ಕಾಣಿಸಿಕೊಂಡ ಹೆಬ್ಬಾವನ್ನು ನೋಡಿ ದಾರಿಹೋಕರು ಒಂದು ಕ್ಷಣ ಶಾಕ್ ಆಗಿದ್ದಾರೆ. ಹೆಬ್ಬಾವು ನೋಡುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಲೈವ್ ವಿಡಿಯೋ ಮಾಡಿದ್ದಾರೆ. ಹಲವರು ಹೆಬ್ಬಾವಿನ ಫೋಟೋ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಹೆಬ್ಬಾವು ಮಾಲೀಕ 25 ವರ್ಷದ ಡೇವಿನ್ ಜೋನ್ಸ್, ಈ ರೀತಿಯ ಹಾವುಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಕಂಡು ಬರುತ್ತವೆ. ಹೆಬ್ಬಾವಿಗೆ ಜೂಲಿಯಟ್ ಎಂದು ಹೆಸರಿಟ್ಟಿದ್ದು, ನಾಯಿಗಳಿಂದ ರಕ್ಷಿಸಿಕೊಳ್ಳಲು ಗ್ಯಾರೇಜ್ ಮೇಲ್ಗಡೆಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಬಂದಿದ್ದು ನೋಡಿ ನನಗೆ ಭಯವಾಯ್ತು. ಜೂಲಿಯಟ್ ಗೆ ಏನು ಮಾಡುತ್ತಾರೆ ಎಂಬ ಆತಂಕ ನನ್ನಲ್ಲಿ ಮನೆ ಮಾಡಿತ್ತು ಎಂದು ತಿಳಿಸಿದರು.
Advertisement
ತುಂಬಾ ಸಮಯದಿಂದ ಜೂಲಿಯಟ್ ಜೊತೆಯಲ್ಲಿದ್ದೇನೆ. ಈ ರೀತಿಯ ಹಾವುಗಳು ಯಾರಿಗೂ ಹಾನಿಯುಂಟು ಮಾಡಲ್ಲ. ಭಯಗೊಳ್ಳುವ ಹಾವುಗಳು ಸುರಕ್ಷಿತ ಸ್ಥಳದತ್ತ ತೆರಳುತ್ತವೆ. ಹಾಗೆಯೇ ಜೂಲಿಯಟ್ ಮೇಲ್ಗಡೆಗೆ ಹೋಗಿದೆ. ಕಳೆದ ಮೂರು ವರ್ಷಗಳಿಂದ ಜೂಲಿಯಟ್ ನನ್ನ ಬಳಿ ಇದೆ. ಪಂಜರದಲ್ಲಿ ಹುಟ್ಟಿ ಅಲ್ಲಿಯೇ ದೊಡ್ಡದಾಗಿದೆ. ಹಾಗಾಗಿ ಅರಣ್ಯ ಪ್ರದೇಶದ ಬಗ್ಗೆ ಜೂಲಿಯಟ್ ಗೆ ಗೊತ್ತಿಲ್ಲ. ಪ್ರತಿನಿತ್ಯ ಆಹಾರ ರೂಪದಲ್ಲಿ ಜೂಲಿಯಟ್ ಗೆ ಮೊಲಗಳನ್ನು ನೀಡಲಾಗುತ್ತದೆ. ಜೂಲಿಯಟ್ ಇರಿಸಿದ್ದ ಪಂಜರದ ಬಾಗಿಲು ಹಾಕದೇ ಇದ್ದಿದರಿಂದ ಹೊರ ಬಂದಿದೆ ಎಂದು ಡೇವಿನ್ ಜೋನ್ಸ್ ಹೇಳುತ್ತಾರೆ.
Advertisement
ಪೊಲೀಸರು ಆಗಮಿಸಿದ ಕೂಡಲೇ ಮೇಲ್ಛಾವಣಿ ಏರಿದ ಡೇವಿನ್ ಹೆಬ್ಬಾವು ರಕ್ಷಣೆ ಮಾಡಿದ್ದಾರೆ. ಹೆಬ್ಬಾವು ಸಾಕಿರುವ ಡೇವಿನ್ ಸ್ಥಳೀಯ ಸರ್ಕಾರದಿಂದ ವಿಶೇಷ ಪರವಾನಿಗೆಯನ್ನು ಪಡೆದುಕೊಂಡಿದ್ದಾರೆ.
https://www.youtube.com/watch?time_continue=12&v=1nqxXxRLRK4