ವಾರಕ್ಕೆ ಹೆಚ್ಚೆಂದರೆ ಐದಾರು ಚಿತ್ರಗಳು ಬಿಡುಗಡೆ ಆಗುವುದು ವಾಡಿಕೆ. ಅದೂ ಕೂಡ ಆರೋಗ್ಯಕರವಾದದ್ದು ಅಲ್ಲ. ಈ ಪ್ರಮಾಣದಲ್ಲಿ ಚಿತ್ರಗಳು ರಿಲೀಸ್ ಆದರೆ, ಥಿಯೇಟರ್ ಸಮಸ್ಯೆಯ ಜೊತೆ ಪ್ರೇಕ್ಷಕರಿಗೆ ಕಿರಿಕಿರಿ ಆಗುವುದು ಸಹಜ. ರಿಲೀಸ್ ಆದ ಅಷ್ಟೂ ಚಿತ್ರಗಳು ಚೆನ್ನಾಗಿದ್ದರೆ, ಪ್ರೇಕ್ಷಕರು ಹಣವನ್ನು ಒಂದೇ ಕಾಲಕ್ಕೆ ತರೋದು ಹೇಗೆ? ಇಂತಹ ನೂರಾರು ಪ್ರಶ್ನೆಗಳ ನಡುವೆಯೇ ನಾಳೆ ಕರ್ನಾಟಕದಲ್ಲಿ 18 ಚಿತ್ರಗಳು ಬಿಡುಗಡೆ ಆಗುತ್ತಿವೆ.
Advertisement
ಈ 18 ಚಿತ್ರಗಳ ಪೈಕಿ ಕನ್ನಡದಲ್ಲೇ 10 ಸಿನಿಮಾಗಳು ಇರುವುದು ಮತ್ತಷ್ಟು ಗಾಬರಿ ಪಡೆಸುವಂತಹ ವಿಷಯ. ವಿಜಯಾನಂದ, ಬಾಂಡ್ ರವಿ, ಡಾ.56, ನಾನೇ ರಾಕ್ಷಸ, ದ್ವಿಪಾತ್ರ, ಸುನಾಮಿ 143, ಕ್ಷೇಮಗಿರಿಯಲ್ಲಿ ಕರ್ನಾಟಕ, ಪ್ರಾಯಶಃ, ಮೈಸೂರು ಡೈರೀಸ್, ಪಂಖುರಿ ಹೀಗೆ ಕನ್ನಡದ ಹತ್ತು ಚಿತ್ರಗಳು ಈ ವಾರ ತೆರೆಕಾಣುತ್ತಿವೆ. ಇವುಗಳ ಜೊತೆಗೆ ಇನ್ನೂ ಎಂಟು ಚಿತ್ರಗಳು ಪರಭಾಷೆಯ ಚಿತ್ರಗಳಾಗಿವೆ. ಇದನ್ನೂ ಓದಿ: ರಶ್ಮಿಕಾ ಕನ್ನಡದ ಹುಡುಗಿ, ಬ್ಯಾನ್ ಯಾಕೆ ಮಾಡಬೇಕು: ಧನಂಜಯ್
Advertisement
Advertisement
ಸಲಾಂ ವೆಂಕಿ, ನಾಯಿ ಶೇಖರ್ ರಿಟರ್ನ್ಸ್, ಗುರ್ತುಂದ ಶೀಲಕಾಲಂ, ವರಲಾರು ಮುಕ್ಕಿಯಂ, ಪಂಚತಂತ್ರಂ, ಮುಖಚಿತ್ರಂ ಸೇರಿದಂತೆ ಹಲವು ಪರಭಾಷಾ ಚಿತ್ರಗಳು ಕೂಡ ಈ ವಾರ ಕನ್ನಡದಲ್ಲಿ ರಿಲೀಸ್ ಆಗುತ್ತಿದ್ದು, ಅಷ್ಟೂ ಥಿಯೇಟರ್ ಗಳಲ್ಲೂ ಪ್ರದರ್ಶನಕ್ಕೆ ಸಿದ್ಧವಾಗಿವೆ. ಕೆಲವರಿಗೆ ಹೆಚ್ಚು ಚಿತ್ರಮಂದಿರಗಳು ಸಿಕ್ಕರೆ, ಇನ್ನೂ ಕೆಲವರು ಥಿಯೇಟರ್ ಗಾಗಿ ಗುದ್ದಾಟ ಕೂಡ ಆರಂಭಿಸಿದ್ದಾರೆ.