ಬೆಂಗಳೂರು: ಸಾಕು ಪ್ರಾಣಿಗಳ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಕಿತ್ತಾಟ ನಡೆಯುವುದು ಹೊಸತೇನಲ್ಲ. ನಾಯಿ ಬೊಗಳುತ್ತಿದೆ ಎಂದೋ, ಕಚ್ಚಿದೆ ಎಂದೋ ದೊಡ್ಡ ಮಾರಾಮಾರಿಗಳೇ ನಡೆದ ನಿದರ್ಶನಗಳೇ ಇವೆ. ಈ ನಡುವೆ ಮನುಷ್ಯನ ಅಟ್ಟಹಾಸ ಮೀತಿ ಮೀರುತ್ತಿದ್ದು ಅಮಾನವೀಯ ಘಟನೆಗಳು ಹೆಚ್ಚಾಗ್ತಿವೆ. ಬೆಂಗಳೂರಿನಲ್ಲಿ (Bengaluru) ನಡೆದಿರುವ ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.
18 ಶ್ವಾಗಳಿಗೆ (Dogs) ವಿಷ ಉಣಿಸಿ ಹತ್ಯೆ ಮಾಡಿರುವ ಘಟನೆ ಆರ್‌ಆರ್ ನಗರದ ಹೊಸಕೆರೆಹಳ್ಳಿ ವಾರ್ಡ್ ಬೌಂಡ್ರಿಯಲ್ಲಿ ನಡೆದಿದೆ. ಇದನ್ನೂ ಓದಿ: 10,000 ಪೊಲೀಸರು.. ಆ್ಯಂಟಿ ಡ್ರೋನ್ ಸಿಸ್ಟಮ್, ಅತ್ಯಾಧುನಿಕ ಕ್ಯಾಮೆರಾ – ಸ್ವಾತಂತ್ರ್ಯೋತ್ಸವಕ್ಕೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ
ನಗರದಲ್ಲಿ ಅನಿಮಲ್ ಆಕ್ಟಿವಿಸ್ಟ್ ತಂಡ (Animal Activist Team) ಮೃತ ಶ್ವಾನಗಳ ದೇಹ ಪತ್ತೆಗೆ ಶೋಧ ಆರಂಭಿಸಿದೆ. ಇದುವರೆಗೆ 7 ಶ್ವಾನಗಳ ಕಳೇಬರ ಪತ್ತೆಯಾಗಿದ್ದು, ಅದರಲ್ಲಿ 5 ಕಳೇಬರ ಸಂಪೂರ್ಣ ಕೊಳೆತುಹೋಗಿದೆ. ನಾಯಿಗಳ ದೇಹವನ್ನ ಹಗ್ಗ ಮತ್ತು ಚೀಲದಲ್ಲಿ ಹಾಕಿ ತುಂಬಲಾಗಿದೆ. ಈ ಬಗ್ಗೆ ಆರ್‌ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರೇಮಿಯೊಂದಿಗೆ ಸರಸವಾಡಲು ಸ್ಕೆಚ್ ಹಾಕಿ ಪತಿಯನ್ನೇ ಮುಗಿಸಿದ ಕೇಡಿ ಲೇಡಿ
Web Stories