ಬೆಂಗಳೂರು: ಸಿದ್ದರಾಮಯ್ಯ (Siddaramaiah) ಕಾಲದ ಹಗರಣಗಳನ್ನು ಕೆದಕುತ್ತಿರೋ ಬಿಜೆಪಿಯವರು (BJP) ಇವತ್ತು ಮತ್ತೊಂದು ನೇಮಕಾತಿ ಅವ್ಯವಹಾರವನ್ನು ಬಹಿರಂಗಪಡಿಸಿದ್ದಾರೆ.
2013 ರಿಂದ 2017ರ ಅವಧಿಯಲ್ಲಿ ಡಿವೈಎಸ್ಪಿ, ಇನ್ಸ್‌ಪೆಕ್ಟರ್, ಎಫ್‌ಡಿಎ (FDA), ಎಸ್‌ಡಿಎ (SDA Job) ಹುದ್ದೆ ಕೊಡಿಸೋದಾಗಿ ಆಕಾಂಕ್ಷಿಗಳಿಂದ 18 ಕೋಟಿ ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಲಕ್ಷ್ಮೀಕಾಂತ್, ಲೋಕೇಶ್ ವಿರುದ್ಧ ಮಂಜುನಾಥ್ ಎಂಬವರು 2018ರಲ್ಲಿ ಕಬ್ಬನ್‌ಪಾರ್ಕ್ ಠಾಣೆಗೆ (Police Station) ದೂರು ಕೊಟ್ಟಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ರೆ ಮುಂದೆ ನಡೆಯೋ ಹಗರಣಗಳನ್ನು ತಡೆಬಹುದಾಗಿತ್ತು. ಆದ್ರೆ ಆಗಿನ ಸರ್ಕಾರ ಕ್ರಮ ವಹಿಸಲಿಲ್ಲ ಎಂದು ಬಿಜೆಪಿ ಶಾಸಕ ಕುಡಚಿ ರಾಜೀವ್ ದೂರಿದ್ದಾರೆ.
ಲಕ್ಷ್ಮೀ ಕಾಂತ್ ಮತ್ತು ಲೋಕೇಶ್ ಅಂದಿನ ಸಿಎಂ ಸಿದ್ದರಾಮಯ್ಯ ಕಾರ್ಯಾಲಯದಲ್ಲಿ ಏಜೆಂಟರಾಗಿ ಕೆಲಸ ಮಾಡ್ತಿದ್ರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಇದು ಯುದ್ಧದ ಸಮಯವಲ್ಲ – ಪುಟಿನ್‌ಗೆ ಪ್ರಧಾನಿ ಮೋದಿ ಸಲಹೆ
ಮೇಲ್ಮನೆ ಸದಸ್ಯ ರವಿಕುಮಾರ್ ಮಾತನಾಡಿ, ಕಾಂಗ್ರೆಸ್‌ನವರು ನಮ್ಮ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಷನ್ ಆರೋಪ ಮಾಡ್ತಾರೆ. ಆದ್ರೆ, ಇದಕ್ಕೆ ದಾಖಲೆ ಒದಗಿಸಿಲ್ಲ. ಈಗ ನಾವು ಮಾಡ್ತಿರೋ ಆರೋಪಕ್ಕೆ ದಾಖಲೆ ಒದಗಿಸಿದ್ದೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೇಲಿಯೇ ಎದ್ದು ಹೊಲ ಮೇಯ್ದ ಕಥೆ – ಸರ್ಕಾರಿ ಸಂಸ್ಥೆಗಳಿಂದಲೇ ಕೆರೆ ಗುಳುಂ
2018ರಲ್ಲಿ ಐವರ ವಿರುದ್ಧ ತನಿಖೆ ನಡೆಸಿದ್ದ ಸಿಐಡಿ 11 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿತ್ತು. ಈ ಪ್ರಕರಣ ಸಂಬಂಧ ಬಿಜೆಪಿ ಸರ್ಕಾರ ಈಗ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದೆ.