ನವದೆಹಲಿ: 18-45 ವಯಸ್ಸಿನ ಮಂದಿಗೆ ಇಂದು ದೆಹಲಿಯಲ್ಲಿ ಮೂರನೇ ಹಂತದ ಕೋವಿಡ್-19 ಲಸಿಕೆಯನ್ನು ಬೆಳಗ್ಗೆಯಿಂದ ನೀಡಲು ಆರಂಭಿಸಲಾಗಿದೆ.
ದೆಹಲಿಯಲ್ಲಿ ಸುಮಾರು 90 ಲಕ್ಷ ಮಂದಿ ಲಸಿಕೆಯನ್ನು ಪಡೆಯಲಿದ್ದಾರೆ. 77 ಶಾಲೆಗಳಲ್ಲಿ ತಲಾ 5 ವ್ಯಾಕ್ಸಿನೇಷನ್ ಬೂತ್‍ಗಳನ್ನು ಸ್ಥಾಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆಯನ್ನು ಪಡೆಯಲು ಸರ್ಕಾರ ಶಾಲೆಗಳಲ್ಲಿ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸ್ಥಾಪಿಸಿದೆ. ಈವರೆಗೂ ರಾಜಧಾನಿ ದೆಹಲಿಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸುಮಾರು 500 ಕೇಂದ್ರಗಳಲ್ಲಿ ಲಸಿಕೆಗಳನ್ನು ನೀಡಲಾಗುತ್ತಿತ್ತು. ಆದರೆ 18-45 ವಯೋಮಾನದವರಿಗೆ ವ್ಯಾಕ್ಸಿನ್ ನೀಡಲು ಪೂರ್ವ- ನೋಂದಣಿ ಕಡ್ಡಾಯವಾಗಿದೆ. ನೇರವಾಗಿ ವ್ಯಾಕ್ಸಿನ್ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement
Advertisement
ಅಪೋಲೊ, ಫೋರ್ಟಿಸ್ ಮತ್ತು ಮ್ಯಾಕ್ಸ್ ಎಂಬ 3 ದೊಡ್ಡ ಆಸ್ಪತ್ರೆಗಳಲ್ಲಿ ಈಗಾಗಲೇ 18-45 ವರ್ಷದ ಮಂದಿಗೆ ಶನಿವಾರದಿಂದ ಸೀಮಿತ ಕೇಂದ್ರಗಳಲ್ಲಿ ಲಸಿಕೆ ನೀಡಲು ಆರಂಭಿಸಲಾಗಿದೆ. 1.34 ಕೋಟಿ ಲಸಿಕೆ ನೀಡಲು ದೆಹಲಿ ಸರ್ಕಾರ ಆದೇಶಿಸಿದ್ದು, ಮುಂದಿನ ಮೂರು ತಿಂಗಳಿನಲ್ಲಿ ಲಸಿಕೆಯನ್ನು ತಲುಪಿಸಲಾಗುವುದು. ಈ ಪೈಕಿ 67 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಪುಣೆ ಮೂಲಕ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಸಂಗ್ರಹಿಸಲಾಗುತ್ತಿದೆ ಎಂದು ತಿಳಿದ್ದಾರೆ.