ಮಡಿಕೇರಿ: ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಕೊಡುಗು ಜಿಲ್ಲೆ ಒಂದರಲ್ಲೇ ಕೇವಲ ಒಂದೂವರೆ ಗಂಟೆಯಲ್ಲಿ ಬರೋಬ್ಬರಿ ಮೂರುವರೆ ಸಾವಿರ ಯುವಜನ ನೋಂದಣಿ ಮಾಡಿಕೊಂಡಿದ್ದಾರೆ.
Advertisement
ಯುವ ಜನತೆ ಆನ್‍ಲೈನ್ ನಲ್ಲಿ ನೋಂದಣಿ ಮಾಡಿಕೊಂಡಿದ್ದು, ರಿಜಿಸ್ಟ್ರೇಷನ್ ಪೋರ್ಟಲ್ ಓಪನ್ ಆಗುತ್ತಿದ್ದಂತೆ ಪೂರ್ಣ ಪ್ರಮಾಣದಲ್ಲಿ ಯುವಕರು ವ್ಯಾಕ್ಸಿನ್ ಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಕೊಡಗಿಗೆ ಮೂರುವರೆ ಸಾವಿರ ಡೋಸ್ ವ್ಯಾಕ್ಸಿನ್ ಬಂದಿದ್ದು, ಮೇ 17ರ ವರೆಗೆ ಈಗಾಗಲೇ ಅಷ್ಟು ಡೋಸ್ ವ್ಯಾಕ್ಸಿನ್ ಈಗಾಗಲೇ ಬುಕ್ ಅಗಿದೆ. ನಿನ್ನೆ ಒಂದೇ ದಿನ ಕೊಡಗಿನಲ್ಲಿ 139 ಯುವ ಜನತೆ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ವ್ಯಾಕ್ಸಿನ್ ಪಡೆದುಕೊಳ್ಳಲು ತುಂಬಾ ಉತ್ಸುಕರಾಗಿದ್ದು, ಯುವಕರು ವ್ಯಾಕ್ಸಿನ್ ಕೇಂದ್ರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
Advertisement
Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ಅಧಿಕಾರಿ ಗೋಪಿನಾಥ್, ಜಿಲ್ಲೆಯ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿದ್ದಾರೆ. ನಮಗೂ ವ್ಯಾಕ್ಸಿನ್ ನೀಡುತ್ತಿರುವುದು ಖುಷಿ ವಿಷಯವಾಗಿದೆ. ಈಗಾಗಲೇ ಮೂರುವರೆ ಸಾವಿರ ಡೋಸ್ ಲಸಿಕೆ ಬಂದಿದೆ. 17ರ ವರೆಗೆ ವ್ಯಾಕ್ಸಿನ್ ನೀಡಲಾಗುತ್ತದೆ.
Advertisement
ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದಿದ್ದ ಯುವತಿ ಮಾತನಾಡಿ, ಯುವಜನರು ಕೆಲಸಗಳ ನಿಮಿತ್ತ ತುಂಬಾ ಓಡಾಡುತ್ತಾರೆ. ರಾಜ್ಯ ಸರ್ಕಾರ ನಮ್ಮನ್ನು ಪರಿಗಣಿಸಿ ವ್ಯಾಕ್ಸಿನ್ ನೀಡುತ್ತಿರುವುದ ಖುಷಿ ವಿಷಯವಾಗಿದೆ. ಈ ಹಿಂದೆ 45 ವರ್ಷದ ಮೇಲ್ಪಟ್ಟರಿಗೆ ಮಾತ್ರ ಲಸಿಕೆ ನೀಡುತ್ತಿದ್ದರು. ಇದೀಗ ಯುವ ಜನತೆಯನ್ನು ಪರಿಗಣಿಸಿ ಲಸಿಕೆ ನೀಡುತ್ತಿರುವುದು ಖುಷಿಯ ವಿಚಾರ. ಹೀಗಾಗಿ ತುಂಬಾ ಉತ್ಸಾಹದಿಂದ ಲಸಿಕೆ ಪಡೆಯುತ್ತಿದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.