ಬೆಂಗಳೂರು: 7ನೇ ವೇತನ ಆಯೋಗದಿಂದ (7th Pay Commission) ಸಿಎಂಗೆ ವರದಿ ಸಲ್ಲಿಸಿದ್ದೇವೆ. ಸರ್ಕಾರಿ ನೌಕರರ ಮೂಲ ವೇತನದ ಮೇಲೆ 27.5% ವೇತನ ಹೆಚ್ಚಳ ಮಾಡಲು ಶಿಫಾರಸು ಮಾಡಿದ್ದೇವೆ ಎಂದು ರಾಜ್ಯ 7ನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ (K Sudhakar Rao) ಹೇಳಿದ್ದಾರೆ.
ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕನಿಷ್ಠ ಮೂಲ ವೇತನವನ್ನು 17,000 ದಿಂದ 27,000ಕ್ಕೆ ಹೆಚ್ಚಳ ಮಾಡಲು ಶಿಫಾರಸು ಮಾಡಿದ್ದೇವೆ. ಪ್ರಮುಖವಾಗಿ ಎಲ್ಲ ಭತ್ಯೆಗಳ ಹೆಚ್ಚಳಕ್ಕೂ ಶಿಫಾರಸು ಮಾಡಿದ್ದೇವೆ. ಒಟ್ಟಾರೆ 7ನೇ ವೇತನ ಆಯೋಗದ ಶಿಫಾರಸುಗಳಿಂದ ಸರ್ಕಾರಕ್ಕೆ ವಾರ್ಷಿಕ 17,500 ಕೋಟಿ ಹೆಚ್ಚುವರಿ ಹೊರೆ ಆಗಲಿದೆ. ಅಂತಿಮ ವರದಿ ಜಾರಿಗೆ ಬಂದಾಗ ಹಾಲಿ ಕೊಡುತ್ತಿರುವ ಮಧ್ಯಂತರ ಪರಿಹಾರ ಇರಲ್ಲ. ಅಂತಿಮ ವರದಿ ಜಾರಿ ಆಗುವ ತನಕ ಮಧ್ಯಂತರ ಪರಿಹಾರ ಮುಂದುವರಿಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಯದುವೀರ್ ವಿರುದ್ಧ ತುಟಿ ಬಿಚ್ಚಬೇಡಿ: ‘ಕೈ’ ನಾಯಕರಿಗೆ ಸಿಎಂ ಎಚ್ಚರಿಕೆ
Advertisement
Advertisement
5 ವರ್ಷಕೊಮ್ಮೆ ವೇತನ ಆಯೋಗ ರಚನೆ, ಶಿಫಾರಸುಗಳ ಬಗ್ಗೆ ಕೆಲವರಿಗೆ ಅಸಮಾಧಾನ ಇರಬಹುದು. ಹಾಗಾಗಿ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನ ಹೆಚ್ಚಳದ ಬಗ್ಗೆ ರಾಜ್ಯ ಸರ್ಕಾರ ವರದಿ ಕೇಳಿತ್ತು. ಕೇಂದ್ರದ ವೇತನ ಹೆಚ್ಚಳ ರೀತಿ ರಾಜ್ಯದಲ್ಲಿಯೂ ಜಾರಿ ಹೇಗೆ ಮಾಡಬಹುದು ಎಂಬ ಬಗ್ಗೆಯೂ ವರದಿ ನೀಡಿದ್ದೇವೆ ಎಂದು ಸುಧಾಕರ್ ರಾವ್ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಏಳನೇ ವೇತನ ಆಯೋಗ ವರದಿ ಸಲ್ಲಿಕೆ; 27.5% ರಷ್ಟು ಹೆಚ್ಚಳಕ್ಕೆ ಶಿಫಾರಸು