ವಾಷಿಂಗ್ಟನ್: 175 ಕೋಟಿ ರೂಪಾಯಿ ಬೆಲೆಬಾಳುವ ವಜ್ರವನ್ನು ಅಮೆರಿಕ ರ‍್ಯಾಪರ್ ಹಣೆಯಲ್ಲಿ ಫಿಕ್ಸ್ ಮಾಡಿಸಿಕೊಂಡಿದ್ದಾನೆ
ಅಮೆರಿಕಾದ ಪ್ರಸಿದ್ಧ ರ‍್ಯಾಪರ್ ಸೈಮರ್ ಬೇಸಿಲ್ ವುಡ್ಸ್ ಈ ರೀತಿಯ ವಿಚಿತ್ರ ಕೆಲಸವನ್ನು ಮಾಡಿದ್ದಾನೆ. ಮಹಿಳೆಯರು ಸಿಂಧೂರವನ್ನು ಹಾಕುವಂತೆ ಈತ ತನ್ನ ಹಣೆಯಲ್ಲಿ 175 ಕೋಟಿ ಬೆಲೆಬಾಳುವ ವಜ್ರವನ್ನು ಫಿಕ್ಸ್ ಮಾಡಿಕೊಂಡು ಎಲ್ಲರ ಗಮನವನ್ನು ಸೆಳೆಯುತ್ತಿದ್ದಾನೆ.
ಹಣೆಯ ಮೇಲೆ ವಜ್ರವನ್ನು ಜೋಡಿಸಿಕೊಳ್ಳಬೇಕು ಎಂದು ಹಲವು ವರ್ಷಗಳ ಹಿಂದೆಯೇ ಅಂದುಕೊಂಡಿದ್ದೆ. ಇದಕ್ಕಾಗಿ ಮೂರು ವರ್ಷಗಳಿಂದ ಹಣವನ್ನು ಕೂಡಿಟ್ಟಿದ್ದೆ. ಒಂದು ವಜ್ರಕ್ಕೆ ಇಷ್ಟೊಂದು ಬೆಲೆ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ದುಬಾರಿಯಾದ ಕಾರುಗಳಿಗೆ ಇಷ್ಟೊಂದು ಬೆಲೆ ತೆತ್ತಿರಲಿಲ್ಲ. ಇದೇ ಕೊನೆ ಮುಂದೆ ಇಂತಹ ಸಾಹಸಗಳಿಗೆ ಕೈ ಹಾಕುವುದಿಲ್ಲ ಎಂದು ಸ್ವತಃ ರ‍್ಯಾಪರ್ ಸೈಮರ್ ಬೇಸಿಲ್ ವುಡ್ಸ್ ಹೇಳಿದ್ದಾನೆ.
View this post on Instagram
ಹಣೆ ಮತ್ತು ಕೈಯಲ್ಲಿ ವಜ್ರದ ಆಭರಣಗಳನ್ನು ತೊಟ್ಟಿರುವ ರ‍್ಯಾಪರ್ ಸೈಮರ್ ಬೇಸಿಲ್ ವುಡ್ಸ್ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ಹರಿದಾಡುತ್ತಿದೆ.