– ಚೀನಾದಲ್ಲಿ 7,700 ಮಂದಿಗೆ ತಟ್ಟಿದ ಸೋಂಕು
– 16 ರಾಷ್ಟ್ರಗಳಲ್ಲಿ ಸೋಂಕು ಪತ್ತೆ
ಬೀಜಿಂಗ್: ವಿಶ್ವಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ಚೀನಾದಲ್ಲಿ ಕಂಡುಬಂದಿರುವ ಮಾರಣಾಂತಿಕ ಕೊರೋನ್ ವೈರಸ್‍ಗೆ ಬಲಿಯಾದವರ ಸಂಖ್ಯೆ 170ಕ್ಕೆ ಏರಿದೆ. ದಿನೇ ದಿನೇ ಚೀನಾದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಈವರೆಗೆ 7,700 ಮಂದಿಗೆ ಸೋಂಕು ತಗುಲಿರುವುದು ಖಚಿತಗೊಂಡಿದೆ.
The death toll from coronavirus in China reaches 170
Read @ANI story | https://t.co/1njobauuBy pic.twitter.com/Q11qTVrFfr
— ANI Digital (@ani_digital) January 30, 2020
Advertisement
ಇತ್ತ ಭಾರತದಲ್ಲಿ ಸುಮಾರು 670 ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಕೇರಳದಲ್ಲಿಯೇ ಅತಿ ಹೆಚ್ಚು ಅಂದರೆ 633 ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಇನ್ನು ದೆಹಲಿಯಲ್ಲಿ 3, ಪಂಜಾಬ್‍ನಲ್ಲಿ 16, ಹರ್ಯಾಣದಲ್ಲಿ 2, ಬಿಹಾರ್ ನಲ್ಲಿ 1, ಮಹಾರಾಷ್ಟ್ರದಲ್ಲಿ 6, ರಾಜಸ್ಥಾನದಲ್ಲಿ 1 ಹಾಗೂ ಕರ್ನಾಟದಲ್ಲಿ 4 ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕಿತ ಪ್ರಕರಣಗಳು ವರದಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?
Advertisement
Advertisement
ಸೋಂಕು ತಗುಲಿರುವ 7,700 ಮಂದಿಯಲ್ಲಿ ಸುಮಾರು 1,370 ಜನರ ಸ್ಥಿತಿ ಗಂಭೀರವಾಗಿದೆ. ಅಲ್ಲದೇ ಸುಮಾರು 12,167 ಜನರಿಗೆ ಕೊರೊನಾ ವೈರಸ್ ತಗುಲಿರುವುದಾಗಿ ಶಂಕೆ ವ್ಯಕ್ತವಾಗಿದೆ. ಬೀಜಿಂಗ್ ಮತ್ತು ಶಾಂಘೈನಲ್ಲಿ 100ಕ್ಕಿಂತ ಹೆಚ್ಚು ಮಂದಿಗೆ ಸೋಂಕು ತಗುಲಿರುವ ಮಾಹಿತಿ ಲಭ್ಯವಾಗಿದೆ.
Advertisement
ಚೀನಾದ ವುಹಾನ್ ಮತ್ತು ಹುಬೈ ಪ್ರಾಂತ್ಯದಲ್ಲಿ ಮೊದಲು ಈ ಕೊರೊನಾ ವೈರಸ್ ಪತ್ತೆಯಾಗಿತ್ತು. ಈ ಪ್ರದೇಶದಲ್ಲಿಯೇ ಸುಮಾರು 160 ಬಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾತೆ. ಚೀನಾದಲ್ಲಿ ಪತ್ತೆಯಾದ ಈ ವೈರಸ್ ವಿಶ್ವಾದ್ಯಂತ ಹರಡುತ್ತಿದೆ. ಸುಮಾರು 16 ರಾಷ್ಟ್ರದಲ್ಲಿ ಕೊರೊನಾ ವೈರಸ್ ಹರಡಿರುವುದು ವರದಿಯಾಗಿದೆ.
ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ, ತೈಲ್ಯಾಂಡ್, ತೈವಾನ್, ಸಿಂಗಪೂರ್, ಮಲೇಷ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್, ನೇಪಾಳ, ವಿಯೆಟ್ನಾಂ ಸೇರಿದಂತೆ 16 ದೇಶಗಳಲ್ಲಿ ಕೊರೊನಾ ವೈರಸ್ ತಗುಲಿರುವ ಪ್ರಕರಣಗಳು ವರದಿಯಾಗಿದೆ.