ಪ್ರೀತಿಯ ಸುಳಿಗೆ ಸಿಕ್ಕಿಬಿದ್ದ ಬಾಲೆ – ಮದುವೆಯಾಗಲು ಪ್ರಿಯಕರ ಒಪ್ಪದ್ದಕ್ಕೆ ಆತ್ಮಹತ್ಯೆ

Public TV
1 Min Read
love

ಚಂಡೀಗಢ: ಮದುವೆಯಾಗಲು ನಿರಾಕರಿಸಿದ್ದಕ್ಕೆ 17 ವರ್ಷದ ಹುಡುಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಅಂಬಾಲಾ ಕ್ಯಾಂಟ್‍ನಲ್ಲಿ ನಡೆದಿದೆ.

ಆರೋಪಿಯು ಪಂಜೋಖ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಗರ್ನಾಲಾ ಗ್ರಾಮದ ನಿವಾಸಿಯಾಗಿದ್ದು, ಮೃತ ಹುಡುಗಿಯ ತಂದೆ ನೀಡಿದ ದೂರಿನ ಮೇರೆಗೆ 21 ವರ್ಷದ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ: ಸೂರಜ್‍ರೇವಣ್ಣ

crime

ಟೀ ವ್ಯಾಪಾರಿಯಾಗಿರುವ ಹುಡುಗಿಯ ತಂದೆ, ಯುವಕ ಮತ್ತು ಅವರ ಮಗಳು ಪ್ರೀತಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ತಿಳಿದುಬಂದಿದೆ. ತಮ್ಮ ಮಗಳು ತನ್ನ ಸಹೋದರನ ಬಳಿ ಯುವಕ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ ಎಂದು ಹೇಳಿಕೊಂಡಿದ್ದಳು. ಆದರೆ ನಂತರದ ದಿನಗಳಲ್ಲಿ ಯುವಕ ಮದುವೆಯಾಗಲು ನಿರಾಕರಿಸಿದ್ದಾನೆ. ಇದನ್ನೂ ಓದಿ: ಯುವತಿ ಮೇಲೆ ಗೆಳತಿಯ ಸಹೋದರನಿಂದ್ಲೆ ಅತ್ಯಾಚಾರ- ಮದ್ವೆ ಕ್ಯಾನ್ಸಲ್ ಭಯದಿಂದ ಆತ್ಮಹತ್ಯೆಗೆ ಯತ್ನ

lovers

ಈ ವಿಚಾರವನ್ನು ನನ್ನ ಮಗಳು ಸಹೋದರನೊಂದಿಗೆ ಹಂಚಿಕೊಂಡಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ಆಕೆಯನ್ನು ಸಮಾಧಾನ ಮಾಡಲು ಸಹೋದರ ಪ್ರಯತ್ನಿಸುತ್ತಿದ್ದನು. ಆದರೆ ಆಗಸ್ಟ್ 8ರಂದು ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ. ನಂತರ ಪ್ರಜ್ಞಾಹೀನಳಾಗಿದ್ದ ಆಕೆಯನ್ನು ಸಮೀಪದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ವೈದ್ಯರು ಚಿಕಿತ್ಸೆ ನೀಡಿ ಮರುದಿನವೇ ಡಿಸ್ಚಾರ್ಜ್ ಮಾಡಿದ್ದರು. ಮನೆಯಲ್ಲಿಯೇ ಸಂಪೂರ್ಣ ಚೇತರಿಸಿಕೊಳ್ಳಲು ಕೆಲವು ಔಷಧಗಳನ್ನು ನೀಡಿದ್ದರು. ಆದರೆ ಶುಕ್ರವಾರ ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿತು. ಹೀಗಾಗಿ ಅವಳನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿರುವುದಾಗಿ ತಿಳಿಸಿದ್ದಾರೆ.

ಹುಡುಗಿಯ ತಂದೆ ನೀಡಿದ ದೂರಿನ ಮೇರೆಗೆ ಶುಕ್ರವಾರ ಭಾರತೀಯ ದಂಡ ಸಂಹಿತೆ ಸೆಕ್ಷನ್ 306ರ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿರುವುದಾಗಿ ಪರಾವ್ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಸೂರಜ್ ಕುಮಾರ್ ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *