ಲಕ್ನೋ: ನಾಯಿಗೆ ಹೊಡೆದಿದ್ದಕ್ಕೆ 17 ವರ್ಷದ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಚಿನ್ ಕಶ್ಯಪ್ ಗುಂಡಿನ ದಾಳಿಗೆ ಒಳಗಾದ ವಿದ್ಯಾರ್ಥಿ. 11 ನೇ ತರಗತಿಯನ್ನು ಓದುತ್ತಿರುವ ಸಚಿನ್ ಶನಿವಾರದಂದು ಕಾಲೇಜಿನಿಂದ ಮನೆಗೆ ಬೈಕಿನಲ್ಲಿ ಬರುವಾಗ ನಾಯಿಯೊಂದು ಆತನನ್ನು ಹಿಂಬಾಲಿಸಿ ಬೊಗಳಿದೆ. ಇದನ್ನು ಓದಿ: ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯ ಪ್ರಾಣವೇ ಹೋಯ್ತು!
Advertisement
Advertisement
ಹಿಂಬಾಲಿಸಿ ಬೊಗಳಿದ್ದಕ್ಕೆ ಸಿಟ್ಟಾಗಿ ಆತ ಬೈಕ್ ನಿಲ್ಲಿಸಿ ನಾಯಿಗೆ ಹೊಡೆದಿದ್ದಾನೆ. ನಾಯಿಗೆ ಹೊಡೆದ ವಿಚಾರವಾಗಿ ಮೂವರು ಈತನನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತೆರಳಿ ಒಬ್ಬಾತ ಕಶ್ಯಪ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ದೇಹಕ್ಕೆ ಎರಡು ಬುಲೆಟ್ ಹೊಕ್ಕಿದ್ದು, ಮೀರತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಶ್ಯಪ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ. ಗುಂಡು ಹಾರಿಸಿ ಕೊಲೆಗೆ ಯತ್ನಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv