Mandya | ರೈಲಿಗೆ ಸಿಲುಕಿ 17 ಕುರಿಗಳು ಸಾವು

Public TV
1 Min Read
Sheep

ಮಂಡ್ಯ: ರೈಲಿಗೆ ಸಿಲುಕಿ 17 ಕುರಿಗಳು ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ತಾಲೂಕಿನ ಹೊಸಬೂದನೂರು ಗ್ರಾಮದ ಬಳಿ‌ಯ ರೈಲ್ವೆ ಟ್ರಾಕ್‌ನಲ್ಲಿ (Railway Track) ಜರುಗಿದೆ.

ಇಂದು ಸಂಜೆ ನಾಯಿಗಳು ಅಟ್ಟಾಡಿಸಿದ ವೇಳೆ ಕುರಿಮಂದೆ ಚದುರಿದ ಪರಿಣಾಮ 17 ಕುರಿಗಳು (Sheep) ರೈಲ್ವೆ ಹಳಿ ದಾಟಲೆತ್ನಿಸಿವೆ. ಈ ವೇಳೆ ಬಂದ ರೈಲು 17 ಕುರಿಗಳ ಮೇಲೆ ಹರಿದಿದೆ. ಹೊಸಬೂದನೂರು ಗ್ರಾಮದ ಜಯಮ್ಮ ಅವರಿಗೆ ಸೇರಿದ ಕುರಿ ಮೃತಪಟ್ಟಿದ್ದು, ಸುಮಾರು 2 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ. ಇದನ್ನೂ ಓದಿ: ವಿಮಾನ – ಹೆಲಿಕಾಪ್ಟರ್ ದುರಂತ; ಎಲ್ಲಾ 64 ಮಂದಿ ದುರ್ಮರಣ, 28 ಮೃತದೇಹ ಪತ್ತೆ

ಜಯಮ್ಮ ಅವರು ಬಯಲಿನಲ್ಲಿ ಕುರಿ ಮಂದೆಯನ್ನು ಮೇಯಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ನಾಯಿಗಳು ಅಟ್ಟಾಡಿಸಿದಾಗ ಚದುರಿದ ಕುರಿಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. ಸ್ಥಳಕ್ಕೆ ರೈಲ್ವೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: Mahakumbh 2025 | ಕಾಲ್ತುಳಿತಕ್ಕೆ ಬಲಿಯಾದವರ ಮೃತದೇಹ ಬೆಳಗಾವಿಗೆ – ಕುಟುಂಬಸ್ಥರಲ್ಲಿ ಆಕ್ರಂದನ

Share This Article