– ನೀವೇನ್ ಕ್ರಿಕೆಟ್ ಆಡೋಕೆ ಹೋದ್ರಾ, ಮಜಾ ಮಾಡೋಕೆ ಹೋದ್ರಾ ಅಂತ ಟೀಕೆ
ವಾಷಿಂಗ್ಟನ್: 2024ರ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಲೀಗ್ ಸುತ್ತಿನಲ್ಲೇ ಹೊರಬಿದ್ದಿರುವ ಪಾಕಿಸ್ತಾನ ಕ್ರಿಕೆಟ್ ಆಟಗಾರರ ವಿರುದ್ಧ ತಮ್ಮದೇ ದೇಶದ ಅಭಿಮಾನಿಗಳು (Pak Cricket Fans) ಹಾಗೂ ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
Atiq-uz-Zaman “17 officials, 60 hotel rooms, families – were they there to play cricket or was it a holiday” #T20WorldCup #Cricket pic.twitter.com/JCUgjoGrMw
— Saj Sadiq (@SajSadiqCricket) June 19, 2024
ಹೌದು. ಸದ್ಯ ಟಿ20 ವಿಶ್ವಕಪ್ ಟೂರ್ನಿಯಿಂದ ಪಾಕ್ ತಂಡ ಹೊರಬಿದ್ದರೂ ಆಟಗಾರರು ಮರಳಿ ತವರಿಗೆ ಹಿಂದಿರುಗದೇ ಅಮೆರಿಕದಲ್ಲಿಯೇ ಉಳಿದಿದ್ದಾರೆ. ಐಷಾರಾಮಿ ರೂಮ್‌ಗಳನ್ನು (Luxury Rooms) ಬುಕ್ಕಿಂಗ್ ಮಾಡಿಕೊಂಡಿದ್ದು, ಯುಎಸ್‌ನಲ್ಲಿ ಹಾಲಿಡೆ ಎಂಜಾಯ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಪಾಕ್ ಆಟಗಾರರ ವಿರುದ್ಧ ಹಿರಿಯ ಕ್ರಿಕೆಟಿಗರ ಆಕ್ರೋಶ ಮುಂದುವರಿದಿದೆ.
ಈ ಕುರಿತು ಮಾತನಾಡಿರುವ ಪಾಕ್ ಕ್ರಿಕೆಟ್ ಮಂಡಳಿ ಸದಸ್ಯ (PCB Member) ಅತೀಕ್, ಯುಎಸ್‌ನಲ್ಲಿ ನೀವೇನು ನಾಟಕ ಆಡ್ತಿದ್ದೀರಾ, ಹಿಂದೆಲ್ಲ ನಮ್ಮ ತಂಡಕ್ಕೆ ಒಬ್ಬ ಕೋಚ್ ಮತ್ತು ಓರ್ವ ಮ್ಯಾನೇಜರ್ ಮಾತ್ರ ಇರುತ್ತಿದ್ದರು. ಈಗ ನಿಮಗೆ 17 ಆಟಗಾರರಿಗೆ 17 ಮ್ಯಾನೇಜರ್‌ಗಳಿದ್ದಾರೆ. ನೀವು 60 ಕೊಠಡಿಗಳನ್ನ ಬುಕ್ ಮಾಡಿದ್ದೀರಿ. ರಜೆಯ ಮೇಲೆ ಹೋಗಿರುವಂತೆ ಹೆಂಡತಿ ಮಕ್ಕಳೊಂದಿಗೆ ಸುತ್ತಾಡುತ್ತಿದ್ದೀರಿ. ಅಮೆರಿಕಕ್ಕೆ ಹೋಗಿದ್ದು ಏತಕ್ಕೆ? ಕ್ರಿಕೆಟ್ ಆಡಲು ಹೋಗಿದ್ದೀರೋ ಅಥವಾ ರಜೆಯ ಮಜಾ ಮಾಡಲು ಹೋಗಿದ್ದೀರೋ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಶಿಸ್ತು ಎಂದರೆ ಯಾರಿಗೂ ತಿಳಿಯದೇ ಇರುವಂತಹ ಸಂಸ್ಕೃತಿಯನ್ನ ಹುಟ್ಟುಹಾಕುತ್ತಿದ್ದಾರೆ. ವಿಶ್ವಕಪ್ ಆಡಲು ಹೋದವರ ಗಮನ ಎಲ್ಲಿರಬೇಕು? ಕ್ರಿಕೆಟ್ ಮಂಡಳಿ ನಿಮಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ, ಹೀಗಿರುವಾಗ ನೀವು ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂದು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಇದು ನಿನ್ನ ಭಾರತವಲ್ಲ- ಅಭಿಮಾನಿ ಮೇಲೆ ಹಲ್ಲೆಗೆ ಮುಂದಾದ ಪಾಕ್ ವೇಗಿ
ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್-ಎ ನಲ್ಲಿದ್ದ ಪಾಕ್ ತಂಡ 4 ಪಂದ್ಯಗಳ ಪೈಕಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ, ಲೀಗ್ ಸುತ್ತಿನಲ್ಲೇ ಹೊರಬಿದ್ದಿತು. ಇದನ್ನೂ ಓದಿ: ವಿಶ್ವಕಪ್‌ನಿಂದ ಪಾಕ್ ಔಟ್ – ಬಾಬರ್, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ