ಬೆಂಗಳೂರು: ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ವಿಧಾನಸಭಾ ಚುನಾವಣೆಯ ಕೈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಭಾನುವಾರ ರಾತ್ರಿ ಕಾಂಗ್ರೆಸ್ ಪಟ್ಟಿ ರಿಲೀಸ್ ಆಗಿದ್ದು, ಅದರಲ್ಲಿ ಒಟ್ಟು 218 ಕ್ಷೇತ್ರಗಳ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ 17 ಮಂದಿ ವಲಸಿಗರಿಗೆ ಅಂದರೆ ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದು ಸೇರಿರುವವರಿಗೆ ಟಿಕೆಟ್ ದೊರೆತಿದೆ.
Advertisement
ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿಯಲ್ಲಿ ಜೆಡಿಎಸ್ ಪಕ್ಷದಿಂದ ಬಂದ 9 ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಿದೆ. ಇನ್ನು ಬಿಜೆಪಿಯಿಂದ ಬಂದ ಇಬ್ಬರಿಗೆ ಟಿಕೆಟ್ ಲಭಿಸಿದ್ದು, 6 ಮಂದಿ ಸ್ವತಂತ್ರ ಅಭ್ಯರ್ಥಿಗಳಿಗೆ ಕಾಂಗ್ರೆಸ್ ನ ಟಿಕೆಟ್ ದೊರೆತಿದೆ.
Advertisement
ಜೆಡಿಎಸ್ ಟು ಕಾಂಗ್ರೆಸ್ :
ಜೆಡಿಎಸ್ ನ ಅನಿಲ್‍ಕುಮಾರ್ ಚಿಕ್ಕಮಾದು ಕಾಂಗ್ರೆಸ್ ಸೇರಿದ್ದು, ಇವರಿಗೆ ಹೆಚ್‍ಡಿ ಕೋಟೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಚಲುವರಾಯಸ್ವಾಮಿಗೆ ನಾಗಮಂಗಲದಲ್ಲಿ ಟಿಕೆಟ್ ಲಭಿಸಿದ್ದು, ರಮೇಶ್ ಬಂಡಿಸಿದ್ದೇಗೌಡರಿಗೆ ಶ್ರೀರಂಗಪಟ್ಟಣದಲ್ಲಿ ದೊರೆತಿದೆ. ಮಾಗಡಿಯಿಂದ ಬಾಲಕೃಷ್ಣಗೆ, ಅಖಂಡ ಶ್ರೀನಿವಾಸಮೂರ್ತಿಗೆ ಪುಲಿಕೇಶಿನಗರದಲ್ಲಿ ಅವಕಾಶ ಸಿಕ್ಕಿದೆ. ಇನ್ನು ಜಮೀರ್ ಅಹಮ್ಮದ್‍ಖಾನ್‍ಗೆ ಚಾಮರಾಜಪೇಟೆದಲ್ಲಿ, ಹಗರಿ ಬೊಮ್ಮನಹಳ್ಳಿಯಲ್ಲಿ ಭೀಮಾನಾಯ್ಕ್‍ಗೆ, ಇಕ್ಬಾಲ್ ಅನ್ಸಾರಿಗೆ ಗಂಗಾವತಿ ಕ್ಷೇತ್ರದಲ್ಲಿ ಮತ್ತು ಶ್ರೀಮಂತ ಪಾಟೀಲ್‍ಗೆ ಕಾಗವಾಡದಲ್ಲಿ ಟಿಕೆಟ್ ದೊರೆತಿದೆ.
Advertisement
ಬಿಜೆಪಿ ಟು ಕಾಂಗ್ರೆಸ್:
ಬಿಜೆಪಿಯಲ್ಲಿದ್ದ ಆನಂದ್ ಸಿಂಗ್ ಗೆ ಹೊಸಪೇಟೆಯಲ್ಲಿ ಟಿಕೆಟ್ ಸಿಕ್ಕಿದ್ದು, ಎ.ಆರ್ ಕೃಷ್ಣಮೂರ್ತಿಗೆ ಕೊಳ್ಳೇಗಾಲದಲ್ಲಿ ಟಿಕೆಟ್ ದೊರೆತಿದೆ.
Advertisement
ಪಕ್ಷೇತರರು ಟು ಕಾಂಗ್ರೆಸ್:
ಬಳ್ಳಾರಿಯಿಂದ ನಾಗೇಂದ್ರಗೆ, ಸತೀಶ್ ಸೈಲ್ ಗೆ ಕಾರವಾರದಿಂದ, ಭಟ್ಕಳದಲ್ಲಿ ಮಂಕಾಳ ಸುಬ್ಬವೈದ್ಯಗೆ, ಕೊತ್ತನೂರು ಮಂಜುಗೆ ಮುಳಬಾಗಿಲು, ಬಾಗೆಪಲ್ಲಿಯಲ್ಲಿ ಸುಬ್ಬಾರೆಡ್ಡಿ ಮತ್ತು ಅಶೋಕ್ ಖೇಣಿಗೆ ದಕ್ಷಿಣ ಬೀದರ್ ನಲ್ಲಿ ಟಿಕೆಟ್ ದೊರೆತಿವೆ.
17 ಮಂದಿ ವಲಸಿಗರು:
* ಅನಿಲ್‍ಕುಮಾರ್ ಚಿಕ್ಕಮಾದು – ಹೆಚ್‍ಡಿ ಕೋಟೆ ( ಜೆಡಿಎಸ್)
* ಆನಂದ್‍ಸಿಂಗ್ – ಹೊಸಪೇಟೆ (ಬಿಜೆಪಿ)
* ನಾಗೇಂದ್ರ – ಬಳ್ಳಾರಿ (ಸ್ವತಂತ್ರ)
* ಸತೀಶ್ ಸೈಲ್ – ಕಾರವಾರ (ಸ್ವತಂತ್ರ)
* ಮಂಕಾಳ ಸುಬ್ಬವೈದ್ಯ – ಭಟ್ಕಳ (ಸ್ವತಂತ್ರ)
* ಚಲುವರಾಯಸ್ವಾಮಿ – ನಾಗಮಂಗಲ (ಜೆಡಿಎಸ್)
* ರಮೇಶ್ ಬಂಡಿಸಿದ್ದೇಗೌಡ – ಶ್ರೀರಂಗಪಟ್ಟಣ (ಜೆಡಿಎಸ್)
* ಬಾಲಕೃಷ್ಣ – ಮಾಗಡಿ (ಜೆಡಿಎಸ್)
* ಅಖಂಡ ಶ್ರೀನಿವಾಸಮೂರ್ತಿ – ಪುಲಿಕೇಶಿನಗರ (ಜೆಡಿಎಸ್)
* ಜಮೀರ್ ಅಹಮ್ಮದ್‍ಖಾನ್ – ಚಾಮರಾಜಪೇಟೆ (ಜೆಡಿಎಸ್)
* ಭೀಮಾನಾಯ್ಕ್ – ಹಗರಿ ಬೊಮ್ಮನಹಳ್ಳಿ (ಜೆಡಿಎಸ್)
* ಇಕ್ಬಾಲ್ ಅನ್ಸಾರಿ – ಗಂಗಾವತಿ (ಜೆಡಿಎಸ್)
* ಕೊತ್ತನೂರು ಮಂಜು – ಮುಳಬಾಗಿಲು (ಸ್ವತಂತ್ರ)
* ಸುಬ್ಬಾರೆಡ್ಡಿ – ಬಾಗೆಪಲ್ಲಿ (ಸ್ವತಂತ್ರ)
* ಅಶೋಕ್ ಖೇಣಿ – ಬೀದರ್ ದಕ್ಷಿಣ (ಸ್ವತಂತ್ರ)
* ಎ.ಆರ್ ಕೃಷ್ಣಮೂರ್ತಿ – ಕೊಳ್ಳೇಗಾಲ (ಬಿಜೆಪಿ)
* ಶ್ರೀಮಂತ ಪಾಟೀಲ್ – ಕಾಗವಾಡ ( ಜೆಡಿಎಸ್)