ವಾಷಿಂಗ್ಟನ್: ಫ್ಲೋರಿಡಾದ ಶಾಲೆಯೊಂದರಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ಬುಧವಾರದಂದು ಗುಂಡಿನ ದಾಳಿ ನಡೆಸಿದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದಾರೆ.
Advertisement
ಎಆರ್-15 ರೈಫಲ್ ನೊಂದಿಗೆ ಬಂದಿದ್ದ ಆರೋಪಿ ಶಾಲೆಯ ಕ್ಯಾಂಪಸ್‍ನಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಇಲ್ಲಿನ ಪಾರ್ಕ್‍ಲ್ಯಾಂಡ್ ನಲಿರುವ ಮಜಾರ್ಒರಿ ಸ್ಟೋನ್‍ಮ್ಯಾನ್ ಡೌಗ್ಲಾಸ್ ಹೈಸ್ಕೂಲ್‍ನ ಶಾಲೆಯ ಮಾಜಿ ವಿದ್ಯಾರ್ಥಿ ನಿಕೊಲಾಸ್ ಕ್ರೂಸ್(19) ಈ ಕೃತ್ಯವೆಸಗಿದ್ದಾನೆ. ಈತನನ್ನು ಅಶಿಸ್ತಿನ ಕಾರಣ ಶಾಲೆಯಿಂದ ಹೊರಹಾಕಲಾಗಿತ್ತು ಎಂದು ವರದಿಯಾಗಿದೆ. ದಾಳಿಯಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಶಾಲೆಯ ಕುರ್ಚಿ, ಬೆಂಚ್‍ಗಳ ಕೆಳಗೆ ಅಡಗಿ ಸಹಾಯಕ್ಕಾಗಿ ಫೋನ್‍ನಲ್ಲಿ ಮೆಸೇಜ್ ಕೂಡ ಮಾಡಿದ್ದಾರೆ.
Advertisement
Advertisement
Advertisement
ಆರೋಪಿ ಕ್ರೂಸ್‍ನನ್ನು ಕೋರಲ್ ಸ್ಪ್ರಿಂಗ್ಸ್ ಟೌನ್ ಬಳಿ ಬಂಧಿಸಲಾಗಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಾವು ಈಗಾಗಲೇ ಆತನ ವೆಬ್‍ಸೈಟ್‍ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಅಂಶಗಳನ್ನ ಪರಿಶೀಲಿಸುತ್ತಿದ್ದೇವೆ. ಕೆಲವು ಅಂಶಗಳು ತುಂಬಾ ಆತಂಕಕಾರಿಯಾಗಿದೆ ಎಂದು ಬ್ರೋವಾರ್ಡ್ ಕೌಂಟಿಯ ಶೆರಿಫ್ ಸ್ಕಾಟ್ ಇಸ್ರೇಲ್ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯೊಗೊಂಡವರ ಸಂಖ್ಯೆ ಬಗ್ಗೆ ನಿರ್ದಿಷ್ಟವಾಗಿ ಗೊತ್ತಿಲ್ಲ. ಆದ್ರೆ ಕನಿಷ್ಟ 14 ಜನರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಇಬ್ಬರು ಗಾಯಾಳುಗಳು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
My prayers and condolences to the families of the victims of the terrible Florida shooting. No child, teacher or anyone else should ever feel unsafe in an American school.
— Donald J. Trump (@realDonaldTrump) February 14, 2018