ಢಾಕಾ: ಬಸ್‌ವೊಂದು ಕೊಳಕ್ಕೆ ಉರುಳಿದ ಪರಿಣಾಮ ಮೂರು ಮಕ್ಕಳೂ ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದು 35 ಮಂದಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದ (Bangladesh) ಜಲಕತಿ ಸದರ್ ಉಪಜಿಲಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಢಾರಿಯಾದಿಂದ ಹೊರಟಿದ್ದ ಬಸ್ (Government Bus) ಚಾಲಕನ ನಿಯಂತ್ರಣ ತಪ್ಪಿ ಇದ್ದಕ್ಕಿದ್ದಂತೆ ಕೊಳಕ್ಕೆ ಉರುಳಿದೆ. ಬಸ್ ಮಿತಿಮೀರಿ ಜನರನ್ನ ತುಂಬಿದ್ದರಿಂದ ಕೊಳದಲ್ಲಿ ಮುಳುಗಿದೆ. ನಾನು ಹರಸಾಹದ ಮಾಡಿ ಹೊರಬಂದೆ ಎಂದು ಬದುಕುಳಿದ ಸಂತ್ರಸ್ತ ಮೊಮಿನ್ ಹೇಳಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್ ಮಹಿಳೆ
Advertisement
Advertisement
17 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಫಿರೋಜ್‌ಪುರದ ಭಂಡಾರಿಯಾ ಉಪಜಿಲಾ ಮತ್ತು ಜಲ್ಕತಿಯ ರಾಜಾಪುರ ಪ್ರದೇಶದ ನಿವಾಸಿಗಳು ಹೆಚ್ಚಿನವರಿದ್ದಾರೆ ಎಂದು ಬಾರಿಶಾಲ್ ವಿಭಾಗೀಯ ಆಯುಕ್ತ ಎಂ.ಡಿ ಶೌಕತ್ ಅಲಿ ತಿಳಿಸಿದ್ದಾರೆ.
Advertisement
ಬಾಂಗ್ಲಾದೇಶದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ. ರೋಡ್ ಸೇಫ್ಟಿ ಫೌಂಡೇಶನ್ ಪ್ರಕಾರ, ಕಳೆದ ಜೂನ್‌ನಲ್ಲಿ ಒಟ್ಟು 559 ರಸ್ತೆ ಅಪಘಾತಗಳು ಸಂಭವಿಸಿದ್ದು ಅಪಘಾತಗಳಲ್ಲಿ 562 ಜನರು ಸಾವನ್ನಪ್ಪಿದ್ದು, 812 ಜನರು ಗಾಯಗೊಂಡಿದ್ದಾರೆ. ದೇಶಾದ್ಯಂತ ನಡೆದ 207 ಮೋಟಾರ್‌ಸೈಕಲ್ ಅಪಘಾತಗಳಲ್ಲಿ 169 ಜನರು ಸಾವನ್ನಪ್ಪಿದ್ದಾರೆ ಅದರಲ್ಲಿ 78 ಮಹಿಳೆಯರು ಮತ್ತು 114 ಮಕ್ಕಳೂ ಸೇರಿದ್ದಾರೆ ಎಂಬುದು ತಿಳಿದುಬಂದಿದೆ.
Advertisement
ಜಲಮಾರ್ಗಗಳಲ್ಲಿ ನಡೆದ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ. ಅದೇ ಸಮಯದಲ್ಲಿ 21 ರೈಲ್ವೆ ಅಪಘಾತಗಳು ಸಂಭವಿಸಿದ್ದು 18 ಜನ ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿರುವುದಾಗಿ ವರದಿಗಳು ಹೇಳಿವೆ. ಜೊತೆಗೆ 38 ಪ್ರಾಣಿಗಳು ಬಲಿಯಾಗಿವೆ. ಇದನ್ನೂ ಓದಿ: ಮಣಿಪುರದಲ್ಲಿ ನಡೆದ ಘಟನೆ ದುಃಖಕರ – ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಬ್ರಿಜ್ ಭೂಷಣ್ ಸಿಂಗ್ ಖಂಡನೆ
Web Stories