ದೆಹಲಿಯ ಪಟಾಕಿ ಗೋದಾಮಿನಲ್ಲಿ ಬೆಂಕಿ- 17 ಮಂದಿ ಸಾವು, ಕಟ್ಟಡದಿಂದ ಜಿಗಿದು ಇಬ್ಬರು ಪಾರು

Public TV
1 Min Read
delhi fire

ನವದೆಹಲಿ: ಇಲ್ಲಿನ ಭಾವನ ಕೈಗಾರಿಕ ಪ್ರದೇಶದ ಪಟಾಕಿ ಗೋದಾಮಿಲ್ಲಿ ನಡೆದ ಬೆಂಕಿ ಅವಘಡದಲ್ಲಿ 10 ಮಹಿಳೆಯರು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದಾರೆ.

delhi fire 3

ಶನಿವಾರ ಸಂಜೆ 6.20ರ ವೇಳೆಗೆ ದುರಂತ ಸಂಭವಿಸಿದ್ದು, ಸ್ಥಳಕ್ಕೆ 15ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಗಿಳಿಯಿತು. ಸಂಪೂರ್ಣವಾಗಿ ಬೆಂಕಿಯನ್ನ ಆರಿಸಿಸಲು 3 ಗಂಟೆಗಳ ಸಮಯ ಹಿಡಿಯಿತು. ತಡರಾತ್ರಿವರೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿತ್ತು.

delhi fire 2

ಮೊದಲನೇ ಮಹಡಿಯಲ್ಲಿ 13 ಮಂದಿ, ನೆಲ ಮಹಡಿಯಲ್ಲಿ 3 ಮಂದಿ, ಬೇಸ್‍ಮೆಂಟ್‍ನಲ್ಲಿ ಓರ್ವ ಅಗ್ನಿಗಾಹುತಿಯಾಗಿದ್ದಾರೆ ಅಂತಾ ಅಗ್ನಿಶಾಮಕ ದಳ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ. ಮೂರು ಅಂತಸ್ತಿನ ಕಟ್ಟಡದ ಟೆರೆಸ್‍ನಿಂದ ಜಿಗಿದು ಮಹಿಳೆ ಹಾಗೂ ಓರ್ವ ಪುರುಷ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಇಬ್ಬರಿಗೂ ಗಾಯಗಳಾಗಿವೆ.

delhi fire 1

ಈ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದು ದುರಂತದಲ್ಲಿ ಸಾವು-ನೋವು ಹೆಚ್ಚಾಗಿದ್ದು ಬೇಸರ ಮೂಡಿಸಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ ಅಂತಾ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಮೃತರ ಕುಟಂಬಕ್ಕೆ 5 ಲಕ್ಷ, ಗಾಯಾಳುಗಳಿಗೆ 1 ಲಕ್ಷ ಪರಿಹಾರ ಘೋಷಿಸಿದ್ದಾರೆ.

delhi fire 4

ಘಟನೆಯ ಹಿನ್ನೆಲೆಯಲ್ಲಿ ಪಟಾಕಿ ಫ್ಯಾಕ್ಟರಿಯ ಮಾಲೀಕ ಮನೋಜ್ ಜೈನ್‍ರನ್ನು ಪೊಲೀಸರು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *