– ಐದು ಮಕ್ಕಳ ತಾಯಿ ಮೇಲೆ ನೀಚ ಕೃತ್ಯ
ರಾಂಚಿ: ಪತಿಯ ಮುಂದೆಯೇ 17 ಮಂದಿ ಕಾಮುಕರು ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ವಿಲಕ್ಷಣ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.
ಸಂತ್ರಸ್ತೆ 5 ಮಕ್ಕಳ ತಾಯಿ. ಈಕೆ ಸಂಜೆ ವೇಳೆ ತನ್ನ ಪತಿ ಜೊತೆ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಆರೋಪಿಗಳು ದಾರಿ ತಪ್ಪಿಸಿದ್ದಾರೆ. ದಂಪತಿ ದಾರಿ ತಪ್ಪಿದ್ದರಿಂದ ಕಂಗಾಲಾಗಿದ್ದರು. ಇದೇ ವೇಳೆ ಆರೋಪಿಗಳು ಸ್ಥಳಕ್ಕೆ ಬಂದು ಪತಿ ಮೇಲೆ ದಾಳಿ ಮಾಡಿದ್ದಾರೆ. ಇತ್ತ ಮಹಿಳೆಯ ಮೇಲೆ 17 ಮಂದಿ ಕಾಮುಕರು ಸೇರಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇನ್ನು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್‍ನ ಡುಮ್ಕಾ ಜಿಲ್ಲೆಯ ಮಹಿಳೆಯನ್ನು ಅವಳ ಪತಿಯ ಮುಂದೆ 17 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.