ಅಣ್ಣಾವ್ರ 16ನೇ ಪುಣ್ಯಸ್ಮರಣೆ: ಡಾ.ರಾಜ್ ಸ್ಮಾರಕಕ್ಕೆ ಹರಿದು ಬಂತು ಜನಸಾಗರ

ವರನಟ ಡಾ.ರಾಜ್ ಕುಮಾರ್ ಅವರು ಇನ್ನಿಲ್ಲವಾಗಿ ಇಂದಿಗೆ 16 ವರ್ಷ. ಇಂದು ಡಾ.ರಾಜ್ ಕುಟುಂಬ ಮತ್ತು ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ಮೂಲಕ ನೆಚ್ಚಿನ ಕಲಾವಿದನಿಗೆ ನಮನ ಸಲ್ಲಿಸಿದರು. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ
ಪ್ರತಿ ವರ್ಷದಂತೆ ಈ ವರ್ಷವೂ ಡಾ.ರಾಜ್ ಅವರ ಪುಣ್ಯಸ್ಮರಣೆಯೆಂದು ಅಭಿಮಾನಿಗಳು ನೇತ್ರದಾನ, ಅಂಗಾಂಗ ದಾನ, ಅನ್ನದಾನ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದರು. ರಾಜ್ಯದ ನಾನಾ ಭಾಗಗಳಿಂದ ಬಂದ ಸಾವಿರಾರು ಅಭಿಮಾನಿಗಳು ಇಂದು ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದರು. ಅಲ್ಲದೇ, ಪಕ್ಕದಲ್ಲಿಯೇ ಇರುವ ಪಾರ್ವತಮ್ಮ ಮತ್ತು ಪುನೀತ್ ರಾಜ್ ಕುಮಾರ್ ಅವರ ಸಮಾಧಿಗಳಿಗೂ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!
ನಟ ಶಿವರಾಜ್ ಕುಮಾರ್ ಮತ್ತು ಕುಟುಂಬ, ರಾಘವೇಂದ್ರ ರಾಜ್ ಕುಮಾರ್ ಮತ್ತು ಕುಟುಂಬ, ಅಶ್ವಿನಿ ಪುನೀತ್ ರಾಜ್ ಕುಮಾರ್, ಯುವರಾಜ್ ಕುಮಾರ್, ಡಾ.ರಾಜ್ ಹೆಣ್ಣು ಮಕ್ಕಳಾದ ಪೂರ್ಣಿಮಾ ಮತ್ತು ಕುಟುಂಬ ಸೇರಿದಂತೆ ಡಾ.ರಾಜ್ ಕುಟುಂಬದ ಎಲ್ಲ ಸದಸ್ಯರು ಬೆಳಗ್ಗೆ ಕಂಠೀರವ ಸ್ಟುಡಿಯೋ ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಓದಿ:ʼ2 ಸ್ಟೇಟ್ಸ್’ ಖ್ಯಾತಿಯ ಶಿವಕುಮಾರ್ ಸುಬ್ರಮಣಿಯಂ ನಿಧನ
ಅಣ್ಣಾವ್ರ ಪುಣ್ಯಸ್ಮರಣೆ ದಿನದಂದು ಸ್ಯಾಂಡಲ್ ವುಡ್ ನ ಬಹುತೇಕ ತಾರೆಯರು ಡಾ.ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಡಾ.ರಾಜ್ ಕುಮಾರ್ ಅವರು ನಾಡಿಗೆ ಕೊಟ್ಟ ಕೊಡುಗೆಯನ್ನು ಸ್ಮರಿಸಿದ್ದಾರೆ. ಅಣ್ಣಾವ್ರ ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. 16 ವರ್ಷವಲ್ಲ, 160 ವರ್ಷವಾದರೂ ಅಣ್ಣಾವ್ರ ಅಜರಾಮರ ಎಂದು ಸ್ಮರಿಸಿದ್ದಾರೆ.