ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ತುಳುವಿನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳವಾಡಿ ಗ್ರಾಮದಲ್ಲಿ ಹದಿನಾರನೇ ಶತಮಾನದ ಎರಡು ಹಗೇವುಗಳು ಪತ್ತೆಯಾಗಿವೆ.
Advertisement
ಹಗೇವು ಎಂದರೆ ಪ್ರಾಚೀನ ಕಾಲದಲ್ಲಿ ವಸ್ತುಗಳನ್ನು ತೆಗೆದಿಡುತ್ತಿದ್ದಂತಹ ಸ್ಥಳ. ಬೆಳವಾಡಿಯಲ್ಲಿ ಸಿಕ್ಕಿರುವ ಒಂದು ಹಗೇವು ಸುಮಾರು ನಾಲ್ಕು ಮೀಟರ್ ಅಗಲವಾಗಿದ್ದು, ಎರಡು ಮೀಟರ್ ಎತ್ತರವಾಗಿದೆ. ಮೇಲ್ಭಾಗದಲ್ಲಿ ಮೂರು ಅಡಿಗಳಷ್ಟು ಅಗಲವಾಗಿದ್ದು ಮಳೆಯ ನೀರಿನಿಂದ ಸ್ವಲ್ಪ ಕುಸಿತ ಕಂಡಿದೆ. ಎರಡನೇ ಹಗೇವು ಸುಂದರವಾಗಿದ್ದು, ತಾಂತ್ರಿಕ ಕೌಶಲಗಳಿಂದ ಕೂಡಿದೆ. ಸುಮಾರು ಐದು ಮೀಟರ್ಗಳಷ್ಟು ಅಗಲವಾಗಿದ್ದು ಮೂರು ಮೀಟರ್ ಗಿಂತ ಹೆಚ್ಚು ಎತ್ತರವಾಗಿದೆ. ಆದರೆ ಮೇಲ್ಭಾಗದ ಬಾಯಿ ಕೇವಲ ಒಂದೂವರೆ ಅಡಿಯಷ್ಟು ಮಾತ್ರ ಅಗಲವಾಗಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಆರೋಪಿಗಳ ರಕ್ಷಣೆಗೆ ಲಂಚ – ರವಿ ಡಿ.ಚನ್ನಣ್ಣನವರ್ ಅಮಾನತಿಗೆ AAP ಆಗ್ರಹ
Advertisement
Advertisement
ಹಗೇವಿನ ಒಳ ಭಾಗದಲ್ಲಿ ಅಗಲವಾಗಿದ್ದು ದೊಡ್ಡ ಹಂಡೆಯ ರಚನೆ ಆಕಾರವನ್ನ ಹೊಲುತ್ತದೆ. ಇದು ಮೇಲ್ನೋಟಕ್ಕೆ ಇದ್ದರೂ ಕಾಣದಂತೆ ಇದೆ. ಬ್ಯಾಟರಿ ಹಾಕಿದರೆ ಮಾತ್ರ ಒಳಗಿನ ರಚನೆ ಕಾಣಬಹುದು. ಮಳೆಯ ನೀರಿಗೆ ಏನೂ ಹಾನಿಯಾಗದೆ ಇವತ್ತಿಗೂ ಸುಸಜ್ಜಿತವಾಗಿರುವುದು ಆಗಿನ ಕಾಲದ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಈ ಸುತ್ತಮುತ್ತಲಿನ ಪ್ರದೇಶ ಕಲ್ಬಸ್ತಿಯ ಪಾಶ್ರ್ವನಾಥ ತೀಥರ್ಂಕರರ ಬಸದಿಯ ಸಮೀಪವಿದ್ದು ಈ ಪಾಶ್ರ್ವನಾಥ ತೀರ್ಥಂಕರರು ಬಗ್ಗುಂಜಿ ರಾಣಿ ಕಾಳಲಾದೇವಿಯ ಆರಾಧ್ಯ ದೇವರಾಗಿದ್ದು, ರಾಣಿಯ ಕಾಲದಲ್ಲಿ ಕಲ್ಬಸ್ತಿಯ ಸುತ್ತಮುತ್ತ ಹಲವು ಮನೆಗಳಿದ್ದವು. ಈಗ ದೊರೆತಿರುವ ಹಗೇವುಗಳೂ ರಾಣಿಯ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ ಎಂದು ಅಂದಾಜಿಸಲಾಗಿದೆ. ಈ ಭಾಗದಲ್ಲಿ ಶಾಂತಿ ಪ್ರಿಯ ಜೈನರ ಸಂಖ್ಯೆ ಕಡಿಮೆ ಇದೆ. ಕಲ್ಬಸ್ತಿಯ ಆಸುಪಾಸಿನಲ್ಲಿ ಇದ್ದ ಜೈನರು ತಮ್ಮ ಆಸ್ತಿಯನ್ನು ಸ್ಥಳೀಯರಿಗೆ ಬಳುವಳಿಯಾಗಿ ಕೊಟ್ಟು ಹೋದರಂತೆ ಹಾಗಾಗಿ ಈ ಊರು ಬಳುವಳಿಯಾಗಿ ಬಂದುದರಿಂದ ಬಳುವಾಡಿ ಎಂದು ಹೆಸರಾಗಿ ನಂತರ ಬೆಳವಾಡಿಯಾಗಿದೆ. ಇದನ್ನೂ ಓದಿ: ಫ್ಲೆಕ್ಸ್, ಹೋರ್ಡಿಂಗ್ ಎಲ್ಲಾ ಹಾಕಿದ್ದೇನೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಿ – ಬಿಕ್ಕಿಬಿಕ್ಕಿ ಅತ್ತ ಆಕಾಂಕ್ಷಿ
Advertisement
ದಾಖಲೆಗಳಲ್ಲಿ ಇವತ್ತಿಗೂ ಬಳುವಾಡಿ ಎಂದೇ ದಾಖಲಾಗಿದೆ. ಈ ಹಗೇವುಗಳನ್ನ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಸುರೇಶ್ ಶೋಧಿಸಿದ್ದಾರೆ. ಹಗೇವು ಪತ್ತೆ ಕಾರ್ಯದಲ್ಲಿ ಬೆಳವಾಡಿ ಎಸ್ಟೇಟ್ ಬಿ.ಎಸ್. ಸುರೇಶ್ ಮತ್ತು ಚಂದ್ರಶೇಖರ್ ಆಚಾರ್ಯ ಸಹಕಾರ ನೀಡಿದ್ದಾರೆ.