ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 167 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಈ ಮೂಲಕ ನಿನ್ನೆಗಿಂತ 12 ಪ್ರಕರಣ ಏರಿಕೆ ಕಂಡಿದೆ.
Advertisement
ನಿನ್ನೆ 155 ಪಾಸಿಟಿವ್ ಕೇಸ್ ದಾಖಲಾಗಿತ್ತು. ಇಂದು 12 ಪ್ರಕರಣ ಏರಿಕೆ ಕಂಡು 167ಕ್ಕೆ ಏರಿದೆ. ಈ ಪೈಕಿ ಬೆಂಗಳೂರಿನಲ್ಲಿ 161 ಕೇಸ್ ಪತ್ತೆಯಾಗಿದ್ದು, ಉಳಿದ 4 ಜಿಲ್ಲೆಗಳಲ್ಲಿ 6 ಪ್ರಕರಣ ಪತ್ತೆಯಾಗಿದೆ. ಇದನ್ನೂ ಓದಿ: ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಿಂದ ಶಾಸಕ ಜಮೀರ್
Advertisement
Advertisement
ಇಂದು ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ಇಂದು 101 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 1.09 ದಾಖಲಾಗಿದ್ದು, ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,721ಕ್ಕೆ ತಲುಪಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 40,064 ಮರಣ ಪ್ರಕರಣ ಪತ್ತೆಯಾಗಿದೆ. ಕೆಲದಿನಗಳಿಂದ ಮರಣ ಪ್ರಕರಣ ಸ್ಥಿರವಾಗಿದೆ. ಇದನ್ನೂ ಓದಿ: ಅಂಬೇಡ್ಕರ್ ಭಾವಚಿತ್ರವಿರುವ ಫ್ಲೆಕ್ಸ್ ಹರಿದು ಅಪಮಾನ
Advertisement
ಈವರೆಗೆ ರಾಜ್ಯದಲ್ಲಿ ಒಟ್ಟು 39,50,545 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,08,718 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 7,995 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 15,182 ಸ್ಯಾಂಪಲ್ (ಆರ್ಟಿಪಿಸಿಆರ್ 12,594 + 2,588 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 161, ದಕ್ಷಿಣ ಕನ್ನಡ 3, ಚಿಕ್ಕಮಗಳೂರು, ಮೈಸೂರು ಮತ್ತು ಉತ್ತರಕನ್ನಡದಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 167 ಪ್ರಕರಣ ವರದಿಯಾಗಿದೆ.