ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ ನೂರಾರು ಕಳ್ಳತನ ಪ್ರಕರಣಗಳನ್ನು ಕೇಳಿರುತ್ತೇವೆ. ಇಷ್ಟು ದಿನ ಚಿನ್ನ, ಬೆಳ್ಳಿ ಕದಿಯುತ್ತಿದ್ದ ಕಳ್ಳರು ಅದ್ಯಾಕೋ ತಮ್ಮ ವರಸೆ ಬದಲಿಸಿದ್ದಾರೆ. ಚಿನ್ನ, ಬೆಳ್ಳಿ ಓಲ್ಡ್‍ಸ್ಟೈಲ್ ಈಗ ಅದರಷ್ಟೆ ಬೆಲೆಯುಳ್ಳ ಡೀಸೆಲ್ (Diesel) ಕಳ್ಳತನ ಬೆಸ್ಟ್ ಅಂತ ಈಗ ಸಿಕ್ಕ ಸಿಕ್ಕ ಬಸ್‍ಗಳಿಂದ ಡೀಸೆಲ್ ಕದಿಯಲು ಆರಂಭಿಸಿದ್ದಾರೆ.
Advertisement
ಹೌದು, ಯಲಹಂಕ ನ್ಯೂಟೌನ್‍ನ ಬಿಎಂಟಿಸಿ (BMTC) ಘಟಕ-11, ಪುಟ್ಟೇನಹಳ್ಳಿ ಡಿಪೋದಲ್ಲಿ ನಿಲ್ಲಿಸಿದ್ದ ಎರಡು ಬಿಎಂಟಿಎಸ್ ಬಸ್‍ಗಳಿಂದ ಒಟ್ಟು 167 ಲೀಟರ್ ಡೀಸೆಲ್ ಕಳ್ಳರು ಎಗರಿಸಿದ್ದಾರೆ. ಡಿಪೋ ಒಳಗೆ ನಿಲ್ಲಿಸಿದ್ದ ಕೆಎ-57 ಎಫ್-1968 ಮತ್ತು ಕೆಎ-57 ಎಫ್-1019 ವಾಹನ ಸಂಖ್ಯೆಯ ಬಿಎಂಟಿಸಿ ಡೀಸೆಲ್ ಕಳವು ಮಾಡಿದ್ದಾರೆ. ಈ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಸ್ಟೇಷನ್ ನಲ್ಲಿ ಎಫ್‍ಐ ಆರ್ ಕೂಡ ದಾಖಲಾಗಿದೆ. ಇದನ್ನೂ ಓದಿ: ಫೆ.28 ರಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ಆರಂಭ – ಯಾವ ವಾಹನಕ್ಕೆ ಎಷ್ಟು ದರ?
Advertisement
Advertisement
ಒಂದು ಬಸ್ ಗೆ 210 ಲೀಟರ್ ವರೆಗೂ ಡೀಸೆಲ್ ತುಂಬಿಸಬಹುದು. ಕಳೆದ ಫೆ.18ರಂದು ರೂಟ್ ಮುಗಿಸಿಕೊಂಡು ಬಂದ 2 ಬಿಎಂಟಿಸಿ ಬಸ್ ಅನ್ನು ಡಿಪೋನಲ್ಲಿ ನಿಲ್ಲಿಸಲಾಗಿತ್ತು. ಆ ವೇಳೆ ನೈಟ್ ಶಿಫ್ಟ್‍ನಲ್ಲಿ ಹೆಚ್ಚಿನ ಡೀಸೆಲ್ ತುಂಬಿಸಿರೋ ಬಗ್ಗೆ ಪರಿಶೀಲನೆ ಮಾಡಲು ಹೋದಾಗ ಡೀಸೆಲ್ ಚೆಲ್ಲಿರುವುದು ಕಂಡುಬಂದಿದೆ. ಈ ಬಗ್ಗೆ ವಾಹನದ ಸುತ್ತಮುತ್ತ ತಪಾಸಣೆ ಮಾಡುವಾಗ ಎರಡು ಬಸ್ ಬಳಿಯೂ ಸಹ ನೆಲದ ಮೇಲೆ ಡೀಸೆಲ್ ಚೆಲ್ಲಿರುವುದು ಮತ್ತು ಪಕ್ಕದ ಗೋಡೆಯವರೆಗೂ ಡೀಸೆಲ್ ಚೆಲ್ಲಿರುವುದು ಕಂಡುಬಂದಿದೆ. ಯಾರೋ ಅಪರಿಚಿತ ವ್ಯಕ್ತಿಗಳು ಕಾಂಪೌಂಡ್ ಮೂಲಕ ಒಳ ಬಂದು ಎರಡು ಬಸ್ ನಿಂದ 167 ಲೀಟರ್, 14 ಸಾವಿರ ರೂಪಾಯಿ ಡೀಸೆಲ್ ಕದ್ದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
Advertisement
ಈ ಹಿಂದೆಯೂ ಮೂರು ಬಾರಿ ಈ ಡಿಪೋದಲ್ಲೇ ವಾಹನದ ಬ್ಯಾಟರಿಗಳು ಕಳ್ಳತನವಾಗಿದ್ದು, ಆ ಕಳ್ಳತನವೂ ಸಹ ಇದೇ ಗುಂಪಿನ ವ್ಯಕ್ತಿಗಳಿಂದ ಆಗಿರಬಹುದಾಗಿ ಶಂಕಿಸಲಾಗಿದೆ. ಈ ಬಗ್ಗೆ ಯಲಹಂಕ ನ್ಯೂ ಟೌನ್‍ನಲ್ಲಿ ದೂರನ್ನು ಸಹ ಕೊಡಲಾಗಿದೆ. ಒಟ್ಟಿನಲ್ಲಿ ಡೀಸೆಲ್ ಕದ್ದ ಕಳ್ಳರಿಗಾಗಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ. ಡಿಸೇಲ್ ಖದೀಮರು ಸಾರಿಗೆ ಇಲಾಖೆಗೆ ತಲೆನೋವಾಗಿದ್ದಾರೆ.