CrimeLatestMain PostNational

30 ಲಕ್ಷ ರೂ. ಮೌಲ್ಯದ ಗಾಂಜಾ ವಶ – 12 ಜನ ಅರೆಸ್ಟ್

Advertisements

ಪುಣೆ: 30 ಲಕ್ಷ ರೂ. ಮೌಲ್ಯದ 167.25 ಕೆಜಿ ಗಾಂಜಾವನ್ನು ಸಾಗಿಸುತ್ತಿದ್ದ ಎರಡು ಟ್ರಕ್‌ಗಳನ್ನು ವಶಕ್ಕೆ ತೆಗೆದುಕೊಂಡ ಘಟನೆ ಭಾನುವಾರ  ಮಹಾರಾಷ್ಟ್ರದ  ಯಾವತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕರ್ನಾಟಕ, ಆಂಧ್ರಪ್ರದೇಶದಿಂದ ಎರಡು ಸರಕು ಟ್ರಕ್‌ಗಳು ಸೋಲಾಪುರ-ಪುಣೆ ಹೆದ್ದಾರಿಯಿಂದ ಪುಣೆಗೆ ಗಾಂಜಾವನ್ನು ಮಾರಾಟಕ್ಕೆ ತರಲು ಹೋಗುತ್ತಿರುವ ವಿಷಯ ಕೆಲ ಮೂಲಗಳಿಂದ ಮಾಹಿತಿ ಸಿಕ್ಕಿತು. ಮಾಹಿತಿಯ ಆಧಾರದ ಮೇರೆಗೆ ಎರಡು ತಂಡಗಳನ್ನು ನಿಯೋಜಿಸಲಾಗಿತ್ತು. ಬಳಿಕ ಮಧ್ಯಾಹ್ನ ಸುಮಾರು 1:35 ಗಂಟೆಗೆ ಸರಿಯಾಗಿ ಟ್ರಕ್‌ಗಳನ್ನು ಪಟಾಸ್ ಗ್ರಾಮದ ಬಳಿ ತಡೆಯಲಾಗಿದೆ ಎಂದು ಇನ್ಸ್ಪೆಕ್ಟರ್ ನಾರಾಯಣ್ ಹೇಳಿದ್ದಾರೆ. ಇದನ್ನೂ ಓದಿ: ನನಗೆ ಮೂರು ಬಾರಿ ಕಚ್ಚಿತು : ಹಾವು ಕಡಿತದ ಬಗ್ಗೆ ವಿವರಿಸಿದ ಸಲ್ಲು

ಸುಮಾರು 30 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶ ಪಡೆಸಿಕೊಂಡಿದ್ದು, ಈ ಪ್ರಕರಣದಲ್ಲಿ ಎರಡು ಟ್ರಕ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು 12 ಜನರನ್ನು ಬಂಧಿಸಲಾಗಿದೆ. 12 ಮಂದಿಯಲ್ಲಿ, 5 ಮಹಿಳೆಯರು ಮತ್ತು 7 ಪುರುಷರು. ಆರೋಪಿಗಳು ಮಾದಕ ದ್ರವ್ಯವನ್ನು ಪ್ಯಾಕೆಟ್‌ಗಳಲ್ಲಿ ಸುತ್ತಿ ಚಾಲಕನ ಸೀಟಿನ ಅಡಿಯಲ್ಲಿ 6 ಚೀಲಗಳಲ್ಲಿ ಅಡಗಿಸಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದೆ, 1985ರ ಸಂಬಂಧಿತ ಅಡಿಯಲ್ಲಿ ಈ ಕುರಿತು ಯಾವತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಎಲ್ಲಾದ್ರೂ ಮಾಡ್ಲಿ, ಕೊರೊನಾ ನಿಯಮ ಪಾಲಿಸಲಿ: ಬೊಮ್ಮಾಯಿ

Leave a Reply

Your email address will not be published.

Back to top button