ಲಕ್ನೋ: ಕಳೆದ ಐದು ವರ್ಷದಲ್ಲಿ 166 ಕ್ರಿಮಿನಲ್‌ಗಳನ್ನು(Criminals) ಎನ್‌ಕೌಂಟರ್(Encounter) ಮಾಡಿದ್ದು, 4,453 ಮಂದಿ ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(UP CM Yogi Adityanath) ಹೇಳಿದ್ದಾರೆ
ಅಪರಾಧಿಗಳ ವಿರುದ್ಧ ತಮ್ಮ ಸರ್ಕಾರದ “ಶೂನ್ಯ ಸಹಿಷ್ಣುತೆಯನ್ನು” ಪಾಲಿಸುತ್ತದೆ. ನಮ್ಮ ರಾಜ್ಯದಲ್ಲಿ ಅಪರಾಧಿಗಳನ್ನು ಮುಕ್ತವಾಗಿ ಸಂಚರಿಸಲು ಬಿಡುವುದಿಲ್ಲ. ಒಂದೋ ಅಪರಾಧಿಗಳು ಜೈಲಿನಲ್ಲಿ ಇರುತ್ತಾರೋ ಅಥವಾ ಸಾಯುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮನೆ ಮುಂದೆ ಬುಲ್ಡೋಜರ್ ಪ್ರತ್ಯಕ್ಷ – ಪರಾರಿಯಾಗಿದ್ದ ಯುಪಿ ರೇಪ್ ಆರೋಪಿ ಶರಣು
Advertisement
Advertisement
ಪೊಲೀಸ್ ಸ್ಮಾರಕ ದಿನದ ಪರೇಡ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ 13 ಪೊಲೀಸ್(Police) ಸಿಬ್ಬಂದಿಯೂ ಹುತಾತ್ಮರಾಗಿದ್ದಾರೆ ಮತ್ತು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗುವಲ್ಲಿ ಶ್ರಮ ವಹಿಸುತ್ತಿರುವ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಯೋಗಿಜೀ ಇನ್ನು ಮುಂದೆ ತಪ್ಪು ಮಾಡಲ್ಲ, ಪ್ಲೀಸ್ ಕ್ಷಮಿಸಿ ಬಿಡಿ: ಗೋಳಾಡಿದ ಆರೋಪಿ
Advertisement
Advertisement
ಹುತಾತ್ಮರಾದ ಪೊಲೀಸರ ಕುಟುಂಬಗಳ ಕಲ್ಯಾಣ ಮತ್ತು ಅವರ ಅಗತ್ಯಗಳನ್ನು ಪೂರೈಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಇದನ್ನು ಮುಂದುವರಿಸಲಾಗುತ್ತದೆ ಎಂದು ಈ ವೇಳೆ ಭರವಸೆ ನೀಡಿದರು. ಇದನ್ನೂ ಓದಿ: ಯೋಗಿ 2.0 ಆಡಳಿತ: 2 ಎನ್‍ಕೌಂಟರ್ – ಪರಾರಿಯಾಗಿದ್ದ 50ಕ್ಕೂ ಹೆಚ್ಚು ಅಪರಾಧಿಗಳು ಶರಣು
ದರೋಡೆಕೋರರ ಕಾಯ್ದೆಯ ಅಡಿ 58,648 ಅಪರಾಧಿಗಳ ವಿರುದ್ಧ ಕ್ರಮ ಕೈಗೊಂಡರೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ 807 ಮಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕ್ರಿಮಿನಗಳ 4,400 ಕೋಟಿ ರೂ ಮೌಲ್ಯ ಆಸ್ತಿಯನ್ನು ನಾಶ ಮಾಡಿದ್ದೇವೆ ಅಥವಾ ವಶಪಡಿಸಿಕೊಂಡಿದ್ದೇವೆ. ಈ ಜಾಗದಲ್ಲಿ ಬಾಲಕಿಯರಿಗೆ ಶಾಲೆ ಮತ್ತು ಬಡವರಿಗೆ ಮನೆಯನ್ನು ನಿರ್ಮಿಸಿದ್ದೇವೆ ಎಂದು ಯೋಗಿ ತಿಳಿಸಿದರು.