ನವದೆಹಲಿ: ಕೊರೊನಾ ವಿರುದ್ಧ ಲಸಿಕಾ ಅಭಿಯಾನ ನಡೆಸುತ್ತಿರುವ ಭಾರತ ಈವರೆಗೆ 165 ಕೋಟಿ ಡೋಸ್ ಲಸಿಕೆ ನೀಡಿದೆ. ಈ ಕುರಿತಾಗಿ ಆರೋಗ್ಯ ಇಲಾಖೆ ತಿಳಿಸಿದೆ.
Advertisement
ಕಳೆದ 24 ಗಂಟೆಗಳಲ್ಲಿ 56 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ. ಇದರೊಂದಿಗೆ ಶನಿವಾರದ ಹೊತ್ತಿಗೆ ಭಾರತದಲ್ಲಿ 165.04 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಯ್ತು ಕಡಲೆಕಾಯಿ ಮಾರುವವನ ಹಾಡು
Advertisement
Advertisement
ಟ್ವೀಟ್‍ನಲ್ಲಿ ಏನಿದೆ?: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೋವಿಡ್ ವಿರುದ್ಧದ ರಾಷ್ಟ್ರದ ಸಾಮೂಹಿಕ ಹೋರಾಟದೊಂದಿಗೆ, ಭಾರತವು ಈಗ 165 ಕೋಟಿಗೂ ಹೆಚ್ಚು ಡೋಸ್ ಲಸಿಕೆಗಳನ್ನು ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
Advertisement
165 करोड़ वैक्सीन डोज!
In the nation’s collective fight against #COVID19 under PM @NarendraModi Ji’s dynamic leadership, ???????? now has strong protective shield of over 1️⃣6️⃣5️⃣ crore vaccine doses.#SabkoVaccineMuftVaccine pic.twitter.com/SbdwQHOtth
— Dr Mansukh Mandaviya (@mansukhmandviya) January 29, 2022
ಜನವರಿ 3 ರಂದು 15ರಿಂದ 18ರ ವರೆಗಿನ ವಯಸ್ಸಿನವರಿಗೂ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಈವರೆಗೆ 4.5 ಕೋಟಿ ಮಕ್ಕಳು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದ ಯುವ ಸಮುದಾಯಕ್ಕೆ ಸಚಿವ ಮಾಂಡವೀಯ ಅವರು ಇದೇ ವೇಳೆ ಅಭಿನಂದನೆಗಳನ್ನೂ ತಿಳಿಸಿದ್ದಾರೆ.