ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 16,436ಕ್ಕೆ ಇಳಿಕೆ ಕಂಡಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಮಾತ್ರ ಏರಿಳಿತ ಕಾಣುತ್ತಿದೆ. ಇಂದು 60 ಮರಣ ಪ್ರಕರಣ ವರದಿಯಾಗಿದೆ.
Advertisement
ನಿನ್ನೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 20,505 ಮತ್ತು 81 ಮರಣ ಪ್ರಕರಣ ಪತ್ತೆಯಾಗಿತ್ತು. ಇದನ್ನು ಗಮನಿಸಿದಾಗ ನಿನ್ನೆಗಿಂತ ಇಂದು ಪಾಸಿಟಿವ್ ಮತ್ತು ಮರಣ ಪ್ರಕರಣಗಳು ಇಳಿಮುಖಗೊಂಡಿದೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರಿನಲ್ಲಿ 2 ತಿಂಗಳ ಮಗು ಮತ್ತು ಮೈಸೂರಲ್ಲಿ 12 ವರ್ಷದ ಬಾಲಕಿ ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 11.31%ಕ್ಕೆ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಒಟ್ಟು 6,640 ಹೊಸ ಕೇಸ್ ಪತ್ತೆಯಾಗಿದ್ದು, ನಿನ್ನೆಗಿಂತ 2,210 ಕೇಸ್ ಇಳಿಕೆ ಕಂಡಿದೆ. ಇಂದು 14 ಮರಣ ಪ್ರಕರಣ ವರದಿಯಾಗಿದೆ. ಇದನ್ನೂ ಓದಿ: ಹಾಸ್ಟೆಲ್ಗೆ ಟ್ರಾವೆಲ್ ಬ್ಯಾಗ್ನಲ್ಲಿ ಯುವತಿಯನ್ನು ಕರೆತಂದ ಪ್ರಿಯಕರ – ವೀಡಿಯೋ ಮಣಿಪಾಲದ್ದಲ್ಲ
Advertisement
Advertisement
ರಾಜ್ಯದಲ್ಲಿ ಒಟ್ಟು 44,819 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 38,60,774 ಮಂದಿಗೆ ಕೊರೊನಾ ಬಂದಿದೆ. ಒಟ್ಟು 36,72,744 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.36% ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,48,800ರಷ್ಟಿದೆ. ಇದನ್ನೂ ಓದಿ: ನಿಮಗೆ ಪ್ರವೇಶವಿಲ್ಲ – ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಗೇಟ್ನಲ್ಲೇ ತಡೆದ ಪ್ರಿನ್ಸಿಪಾಲ್
Advertisement
ರಾಜ್ಯದಲ್ಲಿ ಇಂದು ಒಟ್ಟು 2,11,539 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,45,204 ಸ್ಯಾಂಪಲ್ (ಆರ್ಟಿಪಿಸಿಆರ್ 1,10,733 + 34,471 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange ಇಲ್ಲವೆಂದ ಪತ್ನಿ..!
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 287, ಬಳ್ಳಾರಿ 348, ಬೆಳಗಾವಿ 1,508, ಬೆಂಗಳೂರು ಗ್ರಾಮಾಂತರ 344, ಬೆಂಗಳೂರು ನಗರ 6,640, ಬೀದರ್ 115, ಚಾಮರಾಜನಗರ 221, ಚಿಕ್ಕಬಳ್ಳಾಪುರ 154, ಚಿಕ್ಕಮಗಳೂರು 132, ಚಿತ್ರದುರ್ಗ 241, ದಕ್ಷಿಣ ಕನ್ನಡ 317, ದಾವಣಗೆರೆ 157, ಧಾರವಾಡ 535, ಗದಗ 109, ಹಾಸನ 470, ಹಾವೇರಿ 203, ಕಲಬುರಗಿ 243, ಕೊಡಗು 478, ಕೋಲಾರ 181, ಕೊಪ್ಪಳ 178, ಮಂಡ್ಯ 345, ಮೈಸೂರು 706, ರಾಯಚೂರು 137, ರಾಮನಗರ 65, ಶಿವಮೊಗ್ಗ 701, ತುಮಕೂರು 572, ಉಡುಪಿ 309, ಉತ್ತರ ಕನ್ನಡ 567, ವಿಜಯಪುರ 124 ಮತ್ತು ಯಾದಗಿರಿಯಲ್ಲಿ 49 ಪಾಸಿಟಿವ್ ಪ್ರಕರಣ ದಾಖಲಾಗಿದೆ.