1,630 ಪಾಸಿಟಿವ್, 19 ಸಾವು – 1,333 ಡಿಸ್ಚಾರ್ಜ್

Public TV
1 Min Read
Corona

ಬೆಂಗಳೂರು: ಇಂದು ರಾಜ್ಯದಲ್ಲಿ 1,630 ಮಂದಿಗೆ ಸೋಂಕು ತಗುಲಿದ್ದು, 1,333 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 19 ಮಂದಿ ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 8,78,055ಕ್ಕೆ ಏರಿಕೆಯಾಗಿದೆ. ಈ ಪೈಕಿ 8,41,432 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 24,890 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,714 ಮಂದಿ ಸೋಂಕಿಗೆ ಮೃತಪಟ್ಟಿದ್ದು, 405 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

list 1 3

ಇಂದು ಒಟ್ಟು 19,974 ಆಂಟಿಜನ್ ಟೆಸ್ಟ್, 1,02,480 ಆರ್.ಟಿ.ಪಿ.ಸಿ.ಆರ್ ಇತ್ಯಾದಿ ಪರೀಕ್ಷೆ ಮಾಡಿದ್ದು, ಒಟ್ಟು 1,22,454 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 1,05,70,159 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.

list 2 4

ಬೆಂಗಳೂರು ನಗರದಲ್ಲಿ 916 ಮಂದಿಗೆ ಸೋಂಕು ಬಂದಿದ್ದು, ಇಂದು 11 ಮಂದಿ ಮೃತಪಟ್ಟಿದ್ದಾರೆ. ಮೈಸೂರು 61, ತುಮಕೂರು 44, ಬೆಂಗಳೂರು ಗ್ರಾಮಾಂತರದಲ್ಲಿ 51 ಜನರಲ್ಲಿ ಸೋಂಕು ಪತ್ತೆಯಾದರೆ, ವಿಜಯಪುರ 19, ಕಲಬುರಗಿ 27, ಚಿತ್ರದುರ್ಗದಲ್ಲಿ 70 ಪ್ರಕರಣಗಳು ಪತ್ತೆಯಾಗಿವೆ.

list 3 4

ಒಟ್ಟು 405 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು ನಗರ 202, ತುಮಕೂರು 29, ಮೈಸೂರು 23, ಕಲಬುರಗಿ 12, ಬಳ್ಳಾರಿಯಲ್ಲಿ 10 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *