ಬೆಂಗಳೂರು: ರಾಜ್ಯದಲ್ಲಿಂದು 983 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 21 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 17,746 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಒಟ್ಟು 1,620 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು 1,59,248 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೋವಿಡ್-19 ಸೋಂಕು ಹರಡುವಿಕೆ ಪ್ರಮಾಣ ಶೇ.0.61 ಮತ್ತು ಮರಣ ಪ್ರಮಾಣ ಶೇ. 2.13 ರಷ್ಟಿದೆ. ರಾಜ್ಯದಲ್ಲಿ ಇದುವರೆಗೂ 29,54,047 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಮೃತರ ಸಂಖ್ಯೆ 37,401ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಕೊಚ್ಚೆ ನೀರೇ ಕುಡಿದಿದ್ದೇನೆ – ಹೆಚ್‍ಡಿಕೆಗೆ ಜೆಡಿಎಸ್ ಶಾಸಕ ಟಾಂಗ್
Advertisement
Advertisement
ರಾಜಧಾನಿ ಬೆಂಗಳೂರಿನಲ್ಲಿ 289 ಜನರಿಗೆ ಸೋಂಕು ತಗುಲಿದ್ರೆ 618 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿ 7,382 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮಹಾಮಾರಿ ಬೆಂಗಳೂರಿನಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡದಲ್ಲಿ ಮಾತ್ರ ಇಂದು 100ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಶಾಸಕರ ಹುಟ್ಟುಹಬ್ಬ – ಹೂಮಳೆಗೆರೆದು ಸಂಭ್ರಮಿಸಿದ ಪೊಲೀಸರು
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 1, ಬಳ್ಳಾರಿ 2, ಬೆಳಗಾವಿ 33, ಬೆಂಗಳೂರು ಗ್ರಾಮಾಂತರ 5, ಬೆಂಗಳೂರು ನಗರ 289, ಬೀದರ್ 1, ಚಾಮರಾಜನಗರ 10, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 32, ಚಿತ್ರದುರ್ಗ 4, ದಕ್ಷಿಣ ಕನ್ನಡ 162, ದಾವಣಗೆರೆ 1, ಧಾರವಾಡ 5, ಗದಗ 0, ಹಾಸನ 62, ಹಾವೇರಿ 1, ಕಲಬುರಗಿ 7, ಕೊಡಗು 16, ಕೋಲಾರ 17, ಕೊಪ್ಪಳ 2, ಮಂಡ್ಯ 17, ಮೈಸೂರು 89, ರಾಯಚೂರು 0, ರಾಮನಗರ 0, ಶಿವಮೊಗ್ಗ 56, ತುಮಕೂರು 41, ಉಡುಪಿ 97, ಉತ್ತರ ಕನ್ನಡ 29, ವಿಜಯಪುರ 1 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಇಂದಿನ 04/09/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/s4Kuef5th1 @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/OLIrh9q4Lo
— K'taka Health Dept (@DHFWKA) September 4, 2021