ಪಾಟ್ನಾ: ಗರ್ಲ್ ಫ್ರೆಂಡ್ ಜೊತೆ ಮಾತಾಡುತ್ತಿದ್ದ 16 ವರ್ಷದ ಹುಡಗನೊಬ್ಬನನ್ನು ಗುಂಪೊಂದು ಹಿಗ್ಗಾಮುಗ್ಗವಾಗಿ ಥಳಿಸಿ ಬರ್ಬರವಾಗಿ ಕೊಲೆಗೈದ ಘಟನೆ ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ಕಿಡ್ವಾಯಿ ನಗರ್ ನಲ್ಲಿ ಗುರುವಾರ ನಡೆದಿದೆ.
ಮೃತ ದುರ್ದೈವಿ ಹುಡುಗ 11ನೇ ತರಗತಿಯಲ್ಲಿ ಓದುತ್ತಿದ್ದನು. ಈತನಿಗೆ ಹುಡುಗರ ಗುಂಪೊಂದು ಬುಧವಾರ ಚೆನ್ನಾಗಿ ಥಳಿಸಿದೆ ಅಂತ ಕಿಡ್ವಾಯಿ ನಗರ್ ಪೊಲೀಸ್ ಠಾಣೆಯ ಅಧಿಕಾರಿ ಅನುರಾಗ್ ಮಿಶ್ರ ತಿಳಿಸಿದ್ದಾರೆ.
Advertisement
ಥಳಿತದ ಪರಿಣಾಮ ಗಂಭೀರ ಗಾಯಗೊಂಡಿದ್ದ ಹುಡುಗನನ್ನು ಕೂಡಲೇ ಲಾಲ್ ಲಜ್ಪತ್ ರಾಯ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಅದಾಗಲೇ ಆತ ಮೃತಪಟ್ಟಿದ್ದಾನೆ ಅಂತ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಸೋದರಿಯನ್ನು ಪ್ರೀತಿಸ್ತಿದ್ದಾನೆಂದು ಹೊಡೆದು ಕೊಂದೇ ಬಿಟ್ಟ!
Advertisement
Advertisement
ಹುಡುಗ ತನ್ನ ನೆರೆಮನೆಯ ಹುಡುಗಿ ಜೊತೆ ಮಾತನಾಡುತ್ತಿದ್ದನು. ಹುಡುಗಿ ಪದೇ ಪದೇ ಹುಡುಗನ ಜೊತೆ ಮಾತನಾಡುತ್ತಿದ್ದಿದ್ದನ್ನು ಆಕೆಯ ಬಾಯ್ ಫ್ರೆಂಡ್ ನೋಡಿದ್ದನು. ಅಲ್ಲದೇ ಈತ ಹುಡುಗನಿಗೆ ತನ್ನ ಹುಡುಗಿಯಿಂದ ದೂರ ಇರು. ಅವಳ ಜೊತೆ ಜಾಸ್ತಿ ಮಾತನಾಡದಂತೆ ಹಲವು ಬಾರಿ ಎಚ್ಚರಿಕೆ ಕೂಡ ನೀಡಿದ್ದನು. ಇದನ್ನೂ ಓದಿ: ರ್ಯಾಗಿಂಗ್ ತಪ್ಪಿಸಿಕೊಂಡಿದ್ದಕ್ಕೆ ಟೆಕ್ ವಿದ್ಯಾರ್ಥಿಗೆ ಶಿಕ್ಷೆ – ಮೈದಾನದಲ್ಲೇ ಮೂರು ಗಂಟೆ ಥಳಿಸಿದ ಹಿರಿಯ ವಿದ್ಯಾರ್ಥಿಗಳು!
Advertisement
ಆದ್ರೆ ಬುಧವಾರ ಸಂಜೆ ಮೃತ ಹುಡುಗ, ಹುಡುಗಿ ಜೊತೆ ಮಾತನಾಡುತ್ತಿದ್ದ ವೇಳೆ ಆಕೆಯ ಬಾಯ್ ಫ್ರೆಂಡ್ ತನ್ನ ಸಂಗಡಿಗರೊಂದಿಗೆ ಬಂದು ಹುಡುಗನಿಗೆ ಚೆನ್ನಾಗಿ ಥಳಿಸಿದ್ದಾನೆ. ಪರಿಣಾಮ ಹುಡುಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv