ಒಡಿಶಾ ರೈಲು ದುರಂತ- ಸಂತ್ರಸ್ತರಿಗಾಗಿ ಅಮೆರಿಕಾದಲ್ಲಿ 8 ಲಕ್ಷ ರೂ. ಸಂಗ್ರಹಿಸಿದ 16ರ ಹುಡುಗಿ

Public TV
1 Min Read
TANISHKA

ನ್ಯೂಯಾರ್ಕ್: ಒಡಿಶಾದಲ್ಲಿ (Odisha) ಸಂಭವಿಸಿದ ಭೀಕರ ರೈಲು ದುರಂತದಿಂದ ಸಂತ್ರಸ್ತರಾದವರಿಗೆ ಭಾರತ (India) ಮೂಲದ 16 ವರ್ಷದ ಹುಡುಗಿಯೊಬ್ಬಳು ಆರ್ಥಿಕ ಸಹಾಯ ಮಾಡಿದ್ದಾಳೆ.

ಹುಡುಗಿಯನ್ನು ತನಿಷ್ಕಾ ಧರಿವಾಲ್ (Tanishka Dhariwal) ಎಂದು ಗುರುತಿಸಲಾಗಿದ್ದು, ಈಕೆ ಪ್ರಸ್ತುತ ಅಮೆರಿಕದಲ್ಲಿ (America) ನೆಲೆಸಿದ್ದಾಳೆ. ಸದ್ಯ ಸಂತ್ರಸ್ತರಿಗೆ ಸಹಾಯ ಮಾಡುವ ಮೂಲಕ ಸಣ್ಣ ವಯಸ್ಸಿನಲ್ಲಿ ಸಹಾಯ ಮಾಡುವ ಮನಸ್ಥಿತಿ ಬೆಳೆಸಿಕೊಂಡಿದ್ದಕ್ಕೆ ಎಲ್ಲೆಡೆಯಿಂದಲೂ ಶ್ಲಾಘನೆ ವ್ಯಕ್ತವಾಗುತ್ತಿದೆ.

ಈಕೆ ಪ್ರಧಾನಮಂತ್ರಿ ಆರೈಕೆ ನಿಧಿಗಾಗಿ (PM Cares Fund) 8,27,500 ರೂ. (ಯುಎಸ್‍ಡಿ 10,000) ಸಂಗ್ರಹಿಸಿದ್ದಾಳೆ. ಅಲ್ಲದೆ ಈ ನಿಧಿಯ ಹಣವನನ್ನು ನ್ಯೂಯಾರ್ಕ್‍ನಲ್ಲಿರುವ ಇಂಡಿಯಾದ ಕಾನ್ಸುಲ್ ಜನರಲ್‍ಗೆ ಹಸ್ತಾಂತರಿಸಿದ್ದಾಳೆ. ಇದನ್ನೂ ಓದಿ: ಖ್ಯಾತ ನಿರ್ದೇಶಕ ಸಿದ್ದಿಕಿಗೆ ಹೃದಯಾಘಾತ, ಆರೋಗ್ಯ ಸ್ಥಿತಿ ಗಂಭೀರ

ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ತನಿಷ್ಕಾ, ಗೆಳೆಯರ ಜೊತೆ ಸೇರಿಕೊಂಡು ನಾನು ಗೋ ಫಂಡ್‍ಮಿ ಎಂಬ ಡಿಜಿಟಲ್ ಅಭಿಯಾನ ಆರಂಭಿಸಿದೆ. ನನ್ನ ಈ ಅಭಿಯಾನಕ್ಕೆ ಸಾಕಷ್ಟು ಮಂದಿ ಕೈ ಜೋಡಿಸಿದರು. ಬೇರೆ ಬೇರೆ ನಗರಗಳು, ಸ್ನೇಹಿತರು ಹಾಗೂ ಮನೆ ಮನೆಗೆ ತೆರಳಿ ಸುಮಾರು 8 ಲಕ್ಷಕ್ಕಿಂತಲೂ ಅಧಿಕ ಹಣ ಸಂಗ್ರಹಿಸಿದೆ ಎಂದರು.

ಒಟ್ಟಿನಲ್ಲಿ ತನಿಷ್ಕಾ ಮಾಡುತ್ತಿರುವ ಈ ಸಹಾಯದ ಹಿಂದೆ ಭಾವನೆಯೊಂದಿದೆ. ನನ್ನ ದೇಶ, ನನ್ನವರು ಎಂಬ ಭಾವನೆಯಿಂದ ತನಿಷ್ಕಾ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಸದ್ಯ ತನಿಷ್ಕಾ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಒಡಿಶಾ ರೈಲು ದುರಂತ: 2023ರ ಜೂನ್ 2ರಂದು ಒಡಿಶಾದ ಬಾಲಸೋರ್‍ನಲ್ಲಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ 293 ಪ್ರಯಾಣಿಕರು ಮೃತಪಟ್ಟಿದ್ದರು. ಇದರಲ್ಲಿ 52 ಮೃತದೇಹಗಳನ್ನು ಯಾರೂ ಗುರುತಿಸದ ಕಾರಣ ಒಂದು ತಿಂಗಳು ಕಳೆದರೂ ಶವಗಳು ಭುವನೇಶ್ವರದ ಏಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಅನಾಥವಾಗಿವೆ. ತ್ರಿವಳಿ ರೈಲು ದುರಂತಕ್ಕೆ ಮಾನವ ಲೋಪವೇ ಕಾರಣ ಎಂದು ವರದಿಯಾಗಿತ್ತು.

Web Stories

Share This Article