ಚೆನ್ನೈ: ಜನಪ್ರಿಯ ಜಲ್ಲಿಕಟ್ಟು ಕ್ರೀಡೆಗೆ 16 ವರ್ಷದ ಬಾಲಕಿ ತಾನು ಸಾಕಿದ್ದ ಗೂಳಿಯನ್ನು ಅಖಾಡಕ್ಕೆ ಇಳಿಸಳಿದ್ದಾಳೆ.
ಜಲ್ಲಿಕಟ್ಟು ಕ್ರೀಡೆಗೆ ವೇದಿಕೆ ಸಜ್ಜಾಗಿದೆ. ಜಲ್ಲಿಕಟ್ಟು ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಪುರುಷರು ಗೂಳಿಯನ್ನು ಪಳಗಿಸುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಾರೆ. ಈ ಪ್ರಸಿದ್ಧ ಜಲ್ಲಿಕಟ್ಟು ಕ್ರೀಡೆಗೆ ಸದ್ಯ ಮಧುರೈನ 16 ವರ್ಷದ ಸ್ನೇಹ ತಾನು ಸಾಕಿದ್ದ ಗೂಳಿಯನ್ನು ವಾಡಿವಾಸಲ್‍ನಿಂದ ಅಖಾಡಕ್ಕೆ ಇಳಿಸಲಿದ್ದಾಳೆ. ಸ್ನೇಹ ಗೂಳಿಯನ್ನು ಏಕಾಂಗಿಯಾಗಿ ಸಾಕಿದ್ದು, ಹಳ್ಳಿಯಲ್ಲಿ ಸ್ನೇಹಳಿಗೆ ಜನರು ಹೆಚ್ಚು ಗೌರವ ನೀಡುತ್ತಾರೆ.
Advertisement
Advertisement
2017ರಲ್ಲಿ ಜಲ್ಲಿಕಟ್ಟು ವಿಚಾರವಾಗಿ ನಡೆದ ಪ್ರತಿಭಟನೆ ವೇಳೆ ವಿಶ್ವಾದ್ಯಂತ ಜಲ್ಲಿಕಟ್ಟು ಕ್ರೀಡೆ ಹಾಗೂ ಇದರ ಬಗ್ಗೆ ತಮಿಳಿಗರು ಹೊಂದಿರುವ ಭಾವನೆ ಕುರಿತಂತೆ ತಿಳಿಯಿತು. ಇದು ಬಾಲಕಿಗೆ ಜಲ್ಲಿಕಟ್ಟು ಕ್ರೀಡೆಗಾಗಿ ಗೂಳಿ ಸಾಕಲು ಪ್ರೇರಣೆ ನೀಡಿತು. ಇದನ್ನೂ ಓದಿ: ವಿಶ್ವ ಆರ್ಥಿಕ ವೇದಿಕೆಯಲ್ಲಿ ಇಂದು ಪ್ರಧಾನಿ ಮೋದಿ ಭಾಷಣ
Advertisement
ಜಲ್ಲಿಕಟ್ಟು ಪ್ರತಿಭಟನೆಯಿಂದ ನನಗೆ ಸ್ಫೂರ್ತಿ ಬಂತು. ನಾನು ನನ್ನ ಸಹೋದರನಿಗೆ ಗೂಳಿ ಕರುವೊಂದು ಬೇಕೆಂದು ಕೇಳಿದ್ದೆ. ಆಗ ಈ ವಿಚಾರವನ್ನು ಅವನು ನನ್ನ ತಂದೆಗೆ ತಿಳಿಸಿದ ಬಳಿಕ ಅವರು ನನಗೆ ಗೂಳಿಯ ಕರುವನ್ನು ತಂದುಕೊಟ್ಟರು. ಅಂದಿನಿಂದ ಗೂಳಿಯ ಆರೈಕೆ ಮಾಡುತ್ತಿದ್ದೇನೆ. ಗೂಳಿಯನ್ನು ನೋಡಿಕೊಳ್ಳುವುದೇ ದೊಡ್ಡ ಕೆಲಸ, ಆದರೆ ಅದನ್ನು ಜಲ್ಲಿಕಟ್ಟುಗಾಗಿ ತರಬೇತುಗೊಳಿಸುವುದು ಸವಾಲಾಗಿತ್ತು ಎಂದು ಹೇಳಿದ್ದಾರೆ.
Advertisement
ವಾರದಲ್ಲಿ ಎರಡು ದಿನ ಸ್ನೇಹ ಗೂಳಿಯನ್ನು ನೋಡಿಕೊಳ್ಳುತ್ತಿದ್ದು, ಗೂಳಿ ಅವಳ ಮಾತನ್ನು ಮಾತ್ರ ಕೇಳುತ್ತದೆ ಎಂದು ತಿಳಿಸಿದ್ದಾರೆ. ನನ್ನ ಗೂಳಿಗೆ ಕಡಲೆ ಮಿಠಾಯಿ ಎಂದರೆ ತುಂಬಾ ಇಷ್ಟ. ಇದು ನನ್ನ ಮತ್ತು ನನ್ನ ಸಹೋದರನ ಇಬ್ಬರಿಗೂ ಪ್ರೀತಿ ತೋರಿಸುತ್ತದೆ. ಮನೆಯಲ್ಲಿದ್ದಾಗ ಗೂಳಿ ತುಂಬಾ ಮೌನವಾಗಿಉತ್ತದೆ. ಆದರೆ ಜಮೀನಿಗೆ ಕರೆದೊಯ್ಯುವಾಗ ಅದು ತುಂಬಾ ಚೇಷ್ಟೆಮಾಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?