ಕಲಬುರಗಿ: ಆಕೆ 40ರ ಆಂಟಿ, ಆದ್ರೆ ಆ ಶಿಕ್ಷಕಿಗೆ ತನ್ನ ಕಾಮದಾಹ ತಿರಿಸಿಕೊಳ್ಳಲು ಬೇಕು 16ರ ನಾಟಿ ಬಾಯ್. ಇಂತಹದೊಂದು ವಿಚಿತ್ರವಾದ ಪ್ರಕರಣ ಬಿಸಿಲನಾಡು ಕಲಬುರಗಿಯಲ್ಲಿ ನಡೆದಿದೆ. ಶಿಕ್ಷಕಿಯ ಪ್ರೀತಿಗೆ ಬಲೆಗೆ ಬಿದ್ದ ಬಾಲಕ ಇದೀಗ ಮನೆ ಬಿಟ್ಟು ಪರಾರಿಯಾಗಿದ್ದು ಬಾಲಕನಿಗಾಗಿ ಪೋಷಕಕರು ಕಣ್ಣಿರಿಡುತ್ತಿದ್ದಾರೆ.
ಕಲಬುರಗಿ ನಗರದ ಶೇಕ್ ರೋಜಾ ಬಡಾವಣೆ ನಿವಾಸಿಗಳಾದ ಅತಿಕ್ ಹಾಗೂ ಭಾನು ಬೇಗಂ ದಂಪತಿಗೆ 16 ವರ್ಷದ ಒಬ್ಬನೇ ಮಗನಿದ್ದು, 2 ವರ್ಷದ ಹಿಂದೆ ತನ್ನ ಶಿಕ್ಷಕಿ ಬಿಲ್ಕಿಸ್ ಪ್ರೀತಿಯ ಬಲೆಗೆ ಬಿದ್ದಿದ್ದ. ಯಾವಾಗ ಪೋಷಕರಿಗೆ ವಿಚಾರ ತಿಳಿದು ವಿರೋಧ ವ್ಯಕ್ತಪಡಿಸಿದ್ರೋ ಕಳೆದ ವರ್ಷ ನವೆಂಬರ್‍ನಲ್ಲಿ ಶಿಕ್ಷಕಿ ಜೊತೆ ಪರಾರಿಯಾಗಿದ್ದಾನೆ.
ಮಗನ ನಾಪತ್ತೆ ಕುರಿತು ಪೋಷಕರು ಹಲವು ಬಾರಿ ದೂರು ಕೊಟ್ರು ಪೊಲೀಸರು ಕ್ಯಾರೆ ಅನ್ಲಿಲ್ಲ. ಮಕ್ಕಳ ಸಹಾಯವಾಣಿ ಸದಸ್ಯರ ನೆರವು ಪಡೆದಾಗ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಬಾಲಕನ ಮಿಸ್ಸಿಂಗ್ ಕೇಸ್ ದಾಖಲಾಗಿದೆ.
ಶಿಕ್ಷಕಿ ಬಿಲ್ಕಿಸ್‍ಗೆ ಮದುವೆಯಾಗಿ 2 ಮಕ್ಕಳು ಇದ್ರು ಗಂಡನಿಗೆ ವಿಚ್ಛೇಧನ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.