ಬೆಂಗಳೂರು: 2018 ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಎರಡನೇ ದಿನವು ಹಲವು ಅಚ್ಚರಿಯ ಬಿಡ್ಗಳಿಗೆ ಕಾರಣವಾಗಿದ್ದು, ಅಫ್ಘಾನಿಸ್ತಾನದ 16 ವರ್ಷದ ಆಟಗಾರನಿಗೆ ಈ ಬಾರಿ ಜಾಕ್ ಪಾಟ್ ಹೊಡೆದಿದೆ.
ನೆರೆಯ ರಾಷ್ಟ್ರ ಅಫ್ಘಾನಿಸ್ತಾನದ ಯುವ ಆಟಗಾರ 16 ವರ್ಷದ ಮುಜೀಬ್ ಜಾಡ್ರನ್ ಅವರನ್ನು ಬರೋಬ್ಬರಿ ನಾಲ್ಕು ಕೋಟಿ ರೂ. ಗಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿಸಿದೆ. ಇದರೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ರಶೀದ್ ಖಾನ್ (09 ಕೋಟಿ ರೂ.), ಮೊಹಮ್ಮದ್ ನಬಿ (1 ಕೋಟಿ ರೂ.) ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲದರೆ ಅಫ್ಘಾನ್ ನ ಮೂರನೇ ಆಟಗಾರನಾಗಿ ಮುಜೀಬ್ ಮಾರಾಟವಾದರು.
Advertisement
Advertisement
ಹರಾಜು ಪ್ರಕ್ರಿಯೆಯಲ್ಲಿ 50 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಮಜೀಬ್ ಜಾಡ್ರನ್ ರನ್ನು ತೀವ್ರ ಪೈಪೋಟಿಯ ನಡುವೆ ನಾಲ್ಕು ಕೋಟಿ ರೂ. ಗಳಿಗೆ ಬಿಡ್ ಮಾಡಿ ಪಂಜಾಬ್ ಖರೀದಿಸಿತು. 2001ರ ಮಾರ್ಚ್ 28 ರಂದು ಜನಿಸಿದ ಮುಜೀಬ್ ಬಲಗೈ ಆಫ್ ಬ್ರೇಕ್ ಸ್ಪಿನ್ನರ್ ಆಗಿದ್ದು, 21 ನೇ ಶತಮಾನದಲ್ಲಿ ಹುಟ್ಟಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
Advertisement
Really happy to be part of @lionsdenkxip and thanks @realpreityzinta ????????????????????????@ACBofficials @MashalAtif @ShafiqStanikzai @afghcricket pic.twitter.com/6OxrBE4tv4
— Muj R 88 (@Mujeeb_R88) January 28, 2018
Advertisement
ಮುಜೀಬ್ ಜಾಡ್ರನ್ ಸಾಧನೆ: 2017 ಡಿಸೆಂಬರ್ 05 ದಂದು ಐಲ್ರ್ಯಾಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮುಜೀಬ್ ಇದುವರೆಗೂ 3 ಪಂದ್ಯಗಳನ್ನು ಆಡಿದ್ದು, 3.86 ಎಕನಾಮಿ ಯೊಂದಿಗೆ ಏಳು ವಿಕೆಟ್ ಉರುಳಿಸಿದ್ದರೆ. ಟಿ20 ಮಾದರಿಯಲ್ಲಿ 7 ಪಂದ್ಯಗಳಲ್ಲಿ ಆಡಿದ್ದು 6.71 ಎಕನಾಮಿಯೊಂದಿಗೆ 5 ವಿಕೆಟ್ ಪಡೆದಿದ್ದಾರೆ. 2017 ಡಿಸೆಂಬರ್ 02 ರಂದು ಕೊನೆಯ ಟಿ20 ಪಂದ್ಯವನ್ನು ಆಡಿದ್ದಾರೆ. ಐಸಿಸಿ ಅಂಡರ್ 19 ತಂಡದಲ್ಲಿ ಅಫ್ಘಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಅಂಡರ್ 19 ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಅಫ್ಘಾನಿಸ್ತಾನ ಪಾಕ್ ಸೋಲಿಸಿ ಪ್ರಶಸ್ತಿ ಜಯಿಸಿತ್ತು. ಈ ಟೂರ್ನಿಯಲ್ಲಿ ಒಟ್ಟು 20 ವಿಕೆಟ್ ಮುಜೀಬ್ ಪಡೆದಿದ್ದರು. ನಂತರ ಬಾಂಗ್ಲಾ ವಿರುದ್ಧ ಸರಣಿಯಲ್ಲಿ ಒಟ್ಟು 17 ವಿಕೆಟ್ ಕಬಳಿಸಿ ಟೂರ್ನಿಯಲ್ಲಿ ಮಿಂಚಿದ್ದರು.
We're back after the break and straight away we're in bidding on for 16 year old Afghanistan spinner Mujeeb Zadran! #LivePunjabiPlayPunjabi #IPLAuction
— Punjab Kings (@PunjabKingsIPL) January 28, 2018
"It was a joint call – coaching staff, analytical staff & scouting staff. Been someone very interesting & young & a bit of a mystery. His name has always been there, so we went for him!"
This is what @realpreityzinta had to say about the purchase of @Mujeeb_Zadran! #IPLAuction
— Punjab Kings (@PunjabKingsIPL) January 28, 2018