ಬಾಗ್ದಾದ್: ಐಸಿಸ್ ಸಂಘಟನೆ ಸೇರಿದ್ದಕ್ಕೆ ಇರಾಕ್ ನ್ಯಾಯಾಲಯವೊಂದು ಟರ್ಕಿ ದೇಶದ 16 ಮಹಿಳೆಯರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿ ಆದೇಶ ಪ್ರಕಟಿಸಿದೆ.
ವಿದೇಶದಿಂದ ಬಂದ ಮಹಿಳೆಯರು ಐಸಿಸ್ ಸಂಘಟನೆಗೆ ಸೇರಿ ಬೆಂಬಲ ನೀಡುತ್ತಿರುವ ಕಾರಣದಿಂದ ಇರಾಕ್ ಸೇನೆ ಇಸ್ಲಾಮಿಕ್ ಸಂಘಟನೆ ಸೇರಿರುವ ವಿರುದ್ಧ ಕಾರ್ಯಾಚರಣೆ ನಡೆಸಿ ಬಂಧಿಸುತ್ತಿದೆ. ಕಳೆದ ಕೆಲ ದಿನಗಳಿಂದ ಸುಮಾರು 1,700 ಅಧಿಕ ವಿದೇಶಿ ಮಹಿಳೆಯರನ್ನು ಬಂಧಿಸಿರುವುದಾಗಿ ಇರಾಕ್ ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
Advertisement
ಮಹಿಳೆಯರಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಮುನ್ನ ಅವರ ಮೇಲಿನ ಆರೋಪಗಳ ಕುರಿತು ವಿಚಾರಣೆ ನಡೆಸಲಾಗಿದ್ದು, ಈ ಮಹಿಳೆಯರು ಐಸಿಸ್ ಸಂಘಟನೆ ಭಯಾನಕ ದಾಳಿ ನಡೆಸಲು ಬೆಂಬಲ ನೀಡಿದ್ದರು. ಪ್ರಕರಣಗಳಿಗೆ ಸಾಕ್ಷ್ಯಗಳು ಸಿಕ್ಕಿದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ ಎಂದು ಇರಾಕ್ ನ ಕೇಂದ್ರ ಕ್ರಿಮಿನಲ್ ಕೋರ್ಟ್ ನ್ಯಾಯಾಧೀಶ ಅಬ್ದುಲ್ ಸತ್ತರ್ ಅಲ್ ಬರ್ಕರ್ ಅವರ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
2014 ರಿಂದ ಇಸ್ಲಾಮಿಕ್ ಉಗ್ರರು ನಡೆಸುತ್ತಿರುವ ಭಯೋತ್ಪಾದನೆಗೆ ಹಲವು ಮಹಿಳೆಯರು ಬೆಂಬಲ ಸೂಚಿಸಿ ಇರಾಕ್ ಮತ್ತು ಸಿರಿಯಾಗೆ ಆಗಮಿಸಿದ್ದರು. ಕಳೆದ ಆಗಸ್ಟ್ ನಲ್ಲಿ ಇರಾಕ್ ಸೈನಿಕರು ಕುರ್ದಿಶ್ ಪೆಶ್ಮೆರ್ಗಾ ಸೇನೆ ಮೇಲೆ ದಾಳಿ ನಡೆಸಿದ ವೇಳೆ ಸುಮಾರು 1,700 ಕ್ಕೂ ಹೆಚ್ಚಿನ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಶರಣಾಗಿದ್ದರು.
Advertisement
ಕಳೆದ ಒಂದು ಒಂದು ವಾರದ ಹಿಂದೆಯಷ್ಟೇ ಟರ್ಕಿಯ ಮಹಿಳೆಗೆ ಮರಣದಂಡನೆ ಹಾಗೂ ಇತರೇ ರಾಷ್ಟ್ರೀಯತೆ ಹೊಂದಿರುವ 10 ಮಹಿಳೆಯರಿಗೆ ಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿತ್ತು. ಕಳೆದ ವರ್ಷದ ಐಸಿಸ್‍ಗೆ ಸೇರ್ಪಡೆ ಮಾಡಿದ ಆರೋಪದ ಅಡಿ ರಷ್ಯಾ ಮಹಿಳೆಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.
ವಿದೇಶದಿಂದ ಇರಾಕ್ ಮತ್ತು ಸಿರಿಯಾ ಗೆ ಆಗಮಿಸುವ ಮಹಿಳೆಯರು ಸ್ವ ಇಚ್ಛೆಯಿಂದ ಐಸಿಸ್ ಸಂಘಟನೆಗೆ ಸೇರಿ ಉಗ್ರರನ್ನೇ ಮದುವೆಯಾಗುತ್ತಾರೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡಲು ಸಹಕಾರ ನೀಡುತ್ತಾರೆ.