ನವದೆಹಲಿ: ಭಾರತದ 16 ವಯಸ್ಸಿನ ಬಾಲಕಿ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ (Mount Everest) ಶಿಖರವನ್ನು ನೇಪಾಳ (Nepal) ಕಡೆಯಿಂದ ಏರುವ ಮೂಲಕ ಸಾಧನೆ ಮಾಡಿದ್ದಾರೆ. ಎತ್ತರದ ಶಿಖರ ಏರಿದ ಅತ್ಯಂತ ಕಿರಿಯ ಭಾರತೀಯ ವರ್ವತಾರೋಹಿ ಎನಿಸಿಕೊಂಡಿದ್ದಾರೆ.
ಭಾರತೀಯ ನೌಕಾಪಡೆಯ ಅಧಿಕಾರಿ ಮಗಳು ಹಾಗೂ 12ನೇ ತರಗತಿ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್ (Kaamya Karthikeyan), ತನ್ನ ತಂದೆ ಜೊತೆ ಏ.3 ರಂದು ಮೌಂಟ್ ಎವರೆಸ್ಟ್ ಏರುವ ಕಾರ್ಯ ಶುರುಮಾಡಿದ್ದರು. ಮೇ 20 ರಂದು 8,849 ಮೀಟರ್ ಎವರೆಸ್ಟ್ ಯಶಸ್ವಿಯಾಗಿ ಏರಿದ್ದಾರೆ. ಇದನ್ನೂ ಓದಿ: ಆರೋಪಿ ಬಂಧನಕ್ಕೆ ಏಮ್ಸ್ ಒಳಗಡೆ ವಾಹನ ನುಗ್ಗಿಸಿದ ಪೊಲೀಸರು!
ಪಶ್ಚಿಮ ನೌಕಾ ಕಮಾಂಡ್ ಎಕ್ಸ್‌ನಲ್ಲಿ ಕಾಮ್ಯ ಫೋಟೊ ಹಂಚಿಕೊಂಡು ಆಕೆಯ ಸಾಧನೆ ಕೊಂಡಾಡಿದೆ. ಮೌಂಟ್ ಎವರೆಸ್ಟ್ ಏರಿದ ವಿಶ್ವದ ಎರಡನೇ ಕಿರಿಯ ಹುಡುಗಿ ಮತ್ತು ನೇಪಾಳದ ಕಡೆಯಿಂದ ವಿಶ್ವದ ಅತಿ ಎತ್ತರದ ಶಿಖರವನ್ನು ಏರಿದ ಕಿರಿಯ ಭಾರತೀಯ ಪರ್ವತಾರೋಹಿಯಾಗಿದ್ದಾರೆ ಎಂದು ಬರೆದುಕೊಂಡಿದೆ.
2020 ರಲ್ಲಿ ದಕ್ಷಿಣ ಅಮೆರಿಕಾ ಮತ್ತು ಏಷ್ಯಾದ ಹೊರಗಿನ ಅತ್ಯುನ್ನತ ಶಿಖರವಾದ ಮೌಂಟ್ ಅಕೊನ್‌ಕಾಗುವಾವನ್ನು ಏರಿದ ವಿಶ್ವದ ಅತ್ಯಂತ ಕಿರಿಯ ಹುಡುಗಿ ಎನಿಸಿಕೊಂಡಿದ್ದಾರೆ. ಏಳು ಖಂಡಗಳ ಪೈಕಿ ಆರರಲ್ಲಿ ಅತ್ಯುನ್ನತ ಶಿಖರಗಳನ್ನು ಏರುವಲ್ಲಿ ಅಪಾರ ಧೈರ್ಯ ಪ್ರದರ್ಶಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಯು ಕಾಮ್ಯಳನ್ನು ಶ್ಲಾಘಿಸಿದೆ. ಇದನ್ನೂ ಓದಿ: ಮೊದಲ ಬಾರಿ ನೈಟ್ ವಿಷನ್ ಗಾಗಲ್ಸ್ ಬಳಸಿ ವಿಮಾನ ಲ್ಯಾಂಡ್ ಮಾಡಿದ ಐಎಎಫ್
ಎಲ್ಲಾ ಏಳು ಖಂಡಗಳ ಅತಿ ಎತ್ತರದ ಶಿಖರಗಳನ್ನು ಏರುವ ಆಕಾಂಕ್ಷೆ ಹೊಂದಿರುವ ಕಾಮ್ಯಳಿಗೆ ಭಾರತೀಯ ನೌಕಾಪಡೆ ಶುಭಹಾರೈಸಿದೆ.