ಮುಂಬೈ: 2012ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಯಾಣ್ ಕೋರ್ಟ್ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಪ್ರಕರಣದಲ್ಲಿ 16 ಮಂದಿಯ ಆರೋಪ ಸಾಬೀತಾಗಿದ್ದು, ಕೊಲೆ, ಪಿತೂರಿ, ಸಾಕ್ಷಿ ನಾಶಕ್ಕಾಗಿ ಕೋರ್ಟ್ ಈ ಶಿಕ್ಷೆ ನೀಡಿ ತೀರ್ಪು ಪ್ರಕಟ ಮಾಡಿದೆ.
Advertisement
ಏನಿದು ಪ್ರಕರಣ?: 2012ರ ಅಕ್ಟೋಬರ್ 3ರಂದು ವಿಕಾಸ್ ಪಾಟೀಲ್ ಎಂಬವರನ್ನ ಅವರು ಕೆಲಸ ಮಾಡುತ್ತಿದ್ದ ಬಾರ್‍ನಲ್ಲಿ ಕೊಲೆ ಮಾಡಲಾಗಿತ್ತು. ಕಾಕಾ ಪಾಟೀಲ್ ಎಂಬ ವ್ಯಕ್ತಿ ಕತ್ತಿಯಿಂದ ವಿಕಾಸ್ ಅವರನ್ನ ಕೊಚ್ಚಿ ಕೊಲೆ ಮಾಡಿದ್ದಾನೆಂದು ವಿಕಾಸ್ ಅವರ ಪತ್ನಿ ಹಾಗೂ ಇತರೆ ಕುಟುಂಬಸ್ಥರಿಗೆ ಮಾಹಿತಿ ಬಂದಿತ್ತು.
Advertisement
Advertisement
ಮೃತ ವಿಕಾಸ್ ಅವರ ಪತ್ನಿ ಕೋರ್ಟ್ ನಲ್ಲಿ ನೀಡಿದ ಹೇಳಿಕೆಯ ಪ್ರಕಾರ, ಕಟುಂಬಸ್ಥರು ನೋಡಿದಾಗ ವಿಕಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಅವರು ಸಾವನ್ನಪ್ಪಿದ್ದರು. ಆರೋಪಿ ಕಾಕಾ ಪಾಟೀಲ್ ಹಾಗೂ ನನ್ನ ಪತಿಯ ನಡುವೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕಲಹವಿತ್ತು. ಹೀಗಾಗಿ ಅವರು ಕೆಲಸಕ್ಕೆ ಹೋಗುವಾಗಲೆಲ್ಲಾ ಕಾಕಾ ಪಾಟೀಲ್ ಕಿರುಕುಳ ನೀಡುತ್ತಿದ್ದ. ಹಲವಾರು ಬಾರಿ ಬೆದರಿಕೆ ಹಾಕಿದ್ದ ಎಂದು ಪತ್ನಿ ಹೇಳಿಕೆ ನೀಡಿದ್ದರು.
Advertisement
ಆರೋಪಿಗಳು ಎರಡು ಕಾರ್‍ಗಳಲ್ಲಿ ಆಯುಧಗಳೊಂದಿಗೆ ಬಂದಿದ್ದರು. ಎಲ್ಲಾ 16 ಮಂದಿ ಸ್ಥಳದಲ್ಲಿದ್ದ ಬಗ್ಗೆ ಹಾಗೂ ಕೃತ್ಯದಲ್ಲಿ ಅವರ ಪಾತ್ರವಿರುವ ಬಗ್ಗೆ ಸಾಕ್ಷಿಗಳಿಂದ ದೃಢಪಟ್ಟಿದ್ದು, ಅವರ ಆರೋಪ ಸಾಬೀತಾಗಿದೆ ಎಂದು ವರದಿಯಾಗಿದೆ.