ಶಿಮ್ಲಾ: ಶಾಲಾ ಬಸ್ ಕಣಿವೆಗೆ ಉರುಳಿ ಮಕ್ಕಳು ಸೇರಿದಂತೆ 16 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ.
Himachal Pradesh | 10 dead after a private bus rolled off a cliff in Jangla area of Sainj valley on Neoli-Shansher road of Kullu district. Injured being shifted to Local hospitals, teams from Kullu moved to spot: DC Kullu Ashutosh Garg pic.twitter.com/iJ06mN1SEF
— ANI (@ANI) July 4, 2022
Advertisement
ಸೇಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬಸ್ ಕುಲುವಿನಿಂದ ಸೈನ್ಜ್ ಕಡೆಗೆ ಸಾಗುತ್ತಿತ್ತು. ನಿಯೋಲಿ-ಶಂಶೇರ್ ಕಣಿವೆ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಬಸ್ ಕಣಿವೆಗೆ ಉರುಳಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಿದ್ದು, ಗಂಭೀರ ಗಾಯಗಳಾಗಿರುವವರೂ ಇರುವ ಕಾರಣ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಇದನ್ನೂ ಓದಿ: ಕಾಳಿ ಕೈಲಿ ಸಿಗರೇಟು, ಮತ್ತೊಂದು ಕೈಯಲ್ಲಿ ಎಲ್ಜಿಬಿಟಿಕ್ಯೂ ಧ್ವಜ : ಭುಗಿಲೆದ್ದ ಆಕ್ರೋಶ
Advertisement
ಅಪಘಾತದ ಮಾಹಿತಿ ಸಿಗುತ್ತಲೇ ಕುಲು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.
Advertisement
कुल्लू की सैंज घाटी में एक निजी बस के हादसे का दुखद समाचार मिला।
पूरा प्रशासन मौके पर है,घायलों को अस्पताल ले जाया जा रहा है।
ईश्वर इस घटना में दिवंगत आत्माओं को शांति प्रदान करें और शोकग्रस्त परिवारजनों को संबल प्रदान करें।
ईश्वर से कामना करता हूं कम से कम लोग हताहत हुए हों।
— Jairam Thakur (@jairamthakurbjp) July 4, 2022
Advertisement
ಈ ನಡುವೆ ಅಹಿತಕರ ಘಟನೆಗೆ ಪ್ರತಿಕ್ರಿಯಿಸಿದ ಹಿಮಾಚಲ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಕುಲುವಿನಲ್ಲಿ ಖಾಸಗಿ ಶಾಲಾ ಬಸ್ ಕಣಿವೆಗೆ ಬಿದ್ದಿರುವ ಸುದ್ದಿ ತಿಳಿದು ಬಂದಿದೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಅಗಲಿದ ಆತ್ಮಗಳಿಗೆ ಶಾಂತಿ ಹಾಗೂ ದುಃಖತಪ್ತ ಕುಟುಂಬಗಳಿಗೆ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಇಂಡೀಗೋದ ನೂರಾರು ಸಿಬ್ಬಂದಿಗೆ ಒಂದೇ ದಿನ ಅನಾರೋಗ್ಯ – ತನಿಖೆಗೆ ಡಿಜಿಸಿಎ ಸೂಚನೆ