ಗೋರಖ್‍ಪುರ್: ಗುರುವಾರ ಒಂದೇ ದಿನದಲ್ಲಿ 16 ಮಕ್ಕಳು ಸಾವನ್ನಪ್ಪಿರುವ ಘಟನೆ ಗೋರಖ್‍ಪುರ್‍ನ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
16 ಮಕ್ಕಳಲ್ಲಿ ಒಂದು ಮಗು ಎನ್ಸೆಫಾಲಿಟಿಸ್‍ನಿಂದ ಸಾವನ್ನಪ್ಪಿದ್ದರೆ ಆಗಸ್ಟ್ 2017ರಲ್ಲಿ 415 ಮಕ್ಕಳು ಸಾವನ್ನಪ್ಪಿದೆ.
Advertisement
Advertisement
ಜನವರಿ 2017 ರಿಂದ ಬಿಆರ್‍ಡಿ ಮೆಡಿಕಲ್ ಕಾಲೇಜಿನಲ್ಲಿ ಒಟ್ಟು 1,256 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬುಧವಾರ ಬಿಆರ್‍ಡಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಪಿ.ಕೆ. ಸಿಂಗ್ ತಿಳಿಸಿದ್ದರು. ಜನವರಿಯಲ್ಲಿ 152, ಫೆಬ್ರವರಿಯಲ್ಲಿ 122, ಮಾರ್ಚ್‍ನಲ್ಲಿ 159, ಜೂನ್‍ನಲ್ಲಿ 137 ಮತ್ತು ಜುಲೈನಲ್ಲಿ 128 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.
Advertisement
ಬಿಆರ್‍ಡಿ ಮೆಡಿಕಲ್ ಕಾಲೇಜ್‍ನಲ್ಲಿ ಒಂದು ವಾರದೊಳಗೆ ಹಲವು ಮಕ್ಕಳು ಹಾಗೂ ನವಜಾತ ಶಿಶುಗಳು ಸಾವನ್ನಪ್ಪುತ್ತಿರುವುದು ದೇಶದ ಗಮನವನ್ನು ಸೆಳೆಯುತ್ತಿದೆ. ಅಮ್ಲಜನಕ ಪೂರೈಕೆದಾರರಿಗೆ ಸರಿಯಾಗಿ ಹಣವನ್ನು ಪಾವತಿ ಮಾಡದ ಕಾರಣ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಳವಾಗಿದೆ.
Advertisement
ಬಿಆರ್‍ಡಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ರಾಜೀವ್ ಮಿಶ್ರಾ ಹಾಗೂ ಅವರ ಪತ್ನಿ ಪೂರ್ಣಿಮಾ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.