ಶ್ರೀನಗರ: ಅಮರನಾಥ ಯಾತ್ರೆಗೆ ತೆರಳುತ್ತಿದ್ದ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ 16 ಯಾತ್ರಿಕರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಯಾತ್ರಿಗಳಿಗೆ ಗಾಯಗೊಂಡಿದೆ.
ಜಮ್ಮು-ಕಾಶ್ಮೀರದ ರಂಬನ್ ಜಿಲ್ಲೆಯ ನಾಚಿನಾಲ್ ಆರ್ಮಿ ಶಿಬಿರದ ಸಮಿಪದ ಕಣಿವೆಯೊಳಗೆ ಮಧ್ಯಾಹ್ನ 1.45ರ ವೇಳೆಗೆ ಬಸ್ ಉರುಳಿ ಬಿದ್ದಿದೆ.
Advertisement
ಗಾಯಗೊಂಡ ಯಾತ್ರಿಗಳನ್ನು ಚಿಕತ್ಸೆಗಾಗಿ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 19 ಗಾಯಗೊಂಡಿರುವ ಯಾತ್ರಿಗಳನ್ನು ವಿಶೇಷ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಆಧೀಕ್ಷಕರಾದ ರಂಬನ್ ಮೊಹನ್ ಲಾಲ್ ಅವರು ಹೇಳಿದ್ದಾರೆ.
Advertisement
ಈ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಂತಾಪ ಸೂಚಿಸಿದ್ದಾರೆ.
Advertisement
#WATCH: Rescue operation by Army underway as bus carrying Amarnath Yatra pilgrims fell off road on Jammu-Srinagar highway in Ramban, 11 dead pic.twitter.com/f1anBmdtdd
— ANI (@ANI) July 16, 2017
Advertisement
Extremely pained by the loss of lives of Amarnath Yatris due to a bus accident in J&K. My thoughts are with the families of the deceased.
— Narendra Modi (@narendramodi) July 16, 2017