– ಒಂದು ಸಿಕ್ಸರ್ ಸಿಡಿಸದ ಡೆಲ್ಲಿ ಕ್ಯಾಪಿಟಲ್ಸ್
– 4 ಸಿಕ್ಸರ್ ಸಿಡಿಸಿದ ಮೋರಿಸ್
ಮುಂಬೈ: ಕ್ರೀಸ್ ಮೋರಿಸ್ ಕೊನೆಯಲ್ಲಿ ಸಿಕ್ಸರ್ ಸಿಡಿಸಿದ ಪರಿಣಾಮ ರಾಜಸ್ಥಾನ ರಾಯಲ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಜಯವನ್ನು ಸಾಧಿಸಿದೆ.
ಗೆಲ್ಲಲು 148 ರನ್ಗಳ ಸವಾಲು ಪಡೆದ ರಾಜಸ್ಥಾನ ಸೋಲುವ ಭೀತಿಯಲ್ಲಿ ಸಿಲುಕಿತ್ತು. ಆದರೆ ದಕ್ಷಿಣ ಆಫ್ರಿಕಾದ ಆಟಗಾರರಾದ ಡೆವಿಡ್ ಮಿಲ್ಲರ್ ಮತ್ತು ಕ್ರೀಸ್ ಮೋರಿಸ್ ಅವರ ಸ್ಫೋಟಕ ಆಟದಿಂದಾಗಿ 19.4 ಓವರಿನಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಹೊಡೆಯುವ ಮೂಲಕ ರಾಜಸ್ಥಾನ ತನ್ನ ಗೆಲುವಿನ ಖಾತೆ ತೆರೆದಿದೆ.
Advertisement
Advertisement
ಗೆದ್ದಿದ್ದು ಹೇಗೆ?
42 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ರಾಹುಲ್ ತೆವಾಟಿಯಾ 19 ರನ್ ಹೊಡೆದರೆ ಡೇವಿಡ್ ಮಿಲ್ಲರ್ 62 ರನ್(43 ಎಸೆತ, 7 ಬೌಂಡರಿ, 2 ಸಿಕ್ಸರ್) ಹೊಡೆದು ಪಂದ್ಯವನ್ನು ರೋಚಕ ಘಟ್ಟದತ್ತ ತಿರುಗಿಸಿದರು. ಕೊನೆಯ 12 ಎಸೆತಗಳಲ್ಲಿ ರಾಜಸ್ಥಾನ ಗೆಲುವಿಗೆ 27 ರನ್ಗಳ ಅಗತ್ಯವಿತ್ತು. ರಬಾಡ ಎಸೆದ 19ನೇ ಓವರಿನಲ್ಲಿ ಕ್ರೀಸ್ ಮೋರಿಸ್ 2 ಸಿಕ್ಸ್ ಸಿಡಿಸಿದರು. ಈ ಓವರಿನಲ್ಲಿ 15 ರನ್ ಬಂತು. ಕೊನೆಯ ಓವರಿನಲ್ಲಿ 12 ರನ್ ಬೇಕಿತ್ತು. ಟಾಮ್ ಕರ್ರನ್ ಎಸೆದ ಮೊದಲ ಎಸೆತದಲ್ಲಿ ಮೋರಿಸ್ ಎರಡು ರನ್ ಓಡಿದರೆ ಎರಡನೇ ಎಸೆತವನ್ನು ಸಿಕ್ಸರ್ ಗೆ ಅಟ್ಟಿದರು. 3ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 4ನೇ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.
Advertisement
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. 37 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು.
ವಿಕೆಟ್ ಉರುಳುತ್ತಿದ್ದರೂ ನಾಯಕ ರಿಷಭ್ ಪಂತ್ 51 ರನ್(32 ಎಸೆತ, 9 ಬೌಂಡರಿ) ಹೊಡೆದರೆ ಲಲಿತ್ ಯಾದವ್ 20 ರನ್, ಟಾಪ್ ಕರ್ರನ್ 21 ರನ್, ಕ್ರೀಸ್ ವೋಕ್ಸ್ 15 ರನ್ ಹೊಡೆದ ಕಾರಣ ತಂಡ ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಈ ಪಂದ್ಯದಲ್ಲಿ ಡೆಲ್ಲಿ ಪರ ಯಾವೊಬ್ಬ ಆಟಗಾರ ಸಿಕ್ಸರ್ ಸಿಡಿಸದೇ ಇರುವುದು ವಿಶೇಷವಾಗಿತ್ತು. ಇದನ್ನೂ ಓದಿ: 5ನೇ ಎಸೆತದಲ್ಲಿ ಸ್ಯಾಮ್ಸನ್ 1 ರನ್ ಓಡಿದ್ದರೆ ರಾಜಸ್ಥಾನಕ್ಕೆ ಗೆಲುವು – ಬಿಸಿ ಬಿಸಿ ಚರ್ಚೆ
ಕ್ರೀಸ್ ಮೋರಿಸ್ ಅವರು 2021ರಲ್ಲಿ ನಡೆದ ಹರಾಜಿನಲ್ಲಿ ದುಬಾರಿ ಬೆಲೆಗೆ ಬಿಡ್ ಆಗಿದ್ದರು. ಬರೋಬ್ಬರಿ 16.25 ಕೋಟಿ ರೂ. ನೀಡಿ ರಾಜಸ್ಥಾನ ರಾಯಲ್ಸ್ ಅವರನ್ನು ಖರೀದಿಸಿತ್ತು. ಮೋರಿಸ್ ಬೌಲರ್ ಮಾತ್ರ ಅಲ್ಲ. ಆಲ್ರೌಂಡರ್ ಆಟಗಾರ. ಇಂದಿನ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿ 27 ರನ್ ನೀಡಿ 1 ವಿಕೆಟ್ ಪಡೆದಿದ್ದರು.