ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನ ಸುಕ್ಷೇತ್ರ ಮಾಡಾಳು ಸ್ವರ್ಣ ಗೌರಿ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದು. ಇಲ್ಲಿ ಪ್ರತಿ ವರ್ಷ ಗೌರಿ ಗಣೇಶ ಹಬ್ಬದ ಸಮಯದಲ್ಲಿ ಅದ್ಧೂರಿ ಜಾತ್ರೆ ನಡೆಯುತ್ತೆ. ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಜನ ಈ ಜಾತ್ರೆಗೆ ಬರುತ್ತಿದ್ದರು. ಆದರೆ ಕೋವಿಡ್ ಸೋಂಕಿನ ಭೀತಿಯಲ್ಲಿ ಇಲ್ಲಿನ ಭಕ್ತ ಮಂಡಳಿ 159ನೇ ಜಾತ್ರಾ ಮಹೋತ್ಸವವನ್ನು ರದ್ದು ಮಾಡಿದೆ.
ಆಗಸ್ಟ್ 21ರಿಂದ 30ರವರೆಗೆ ಸ್ವರ್ಣಗೌರಿ ಜಾತ್ರೆ ನಡೆಸಲು ಮೊದಲೇ ದಿನಾಂಕ ನಿಗದಿಯಾಗಿತ್ತು. ಹಿಟ್ಟಿನಿಂದ ಮಾಡಿದ ಸ್ವರ್ಣ ಗೌರಿ ಇಲ್ಲಿನ ಪ್ರಮುಖ ಕೇಂದ್ರವಾಗಿದ್ದು, ಪ್ರತೀ ಬಾರಿ ಕೋಡಿ ಮಠದ ಶ್ರೀಗಳು ಆಗಮಿಸಿ ಈ ಗೌರಿ ಮೂರ್ತಿಗೆ ಮೂಗುನತ್ತು ಹಾಕುವ ಮೂಲಕ ಜಾತ್ರೆಗೆ ಚಾಲನೆ ನೀಡುತ್ತಿದ್ದರು. ಆದರೆ 100ವರ್ಷಕ್ಕೂ ಹೆಚ್ಚು ಕಾಲ ನಿರಂತರವಾಗಿ ನಡೆದುಕೊಂಡು ಬಂದಿದ್ದ ಜಾತ್ರೆಗೆ ಈ ಬಾರಿ ಕೊರೊನಾ ವಿಘ್ನ ತಂದೊಡ್ಡಿದೆ. ಅಷ್ಟೇ ಅಲ್ಲದೆ ದೇವಾಲಯಕ್ಕೆ ಈ ಬಾರಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.
Advertisement
Advertisement
ಈ ಜಾತ್ರೆಯಲ್ಲಿ ಪ್ರತೀ ಬಾರಿ ಮಡಲಕ್ಕಿ ನೀಡಿ, ಸೀರೆ ನೀಡಿ ಲಕ್ಷಾಂತರ ಭಕ್ತರು ಹರಕೆ ತೀರಿಸುತ್ತಿದ್ದರು. ಹಾಗೆ ಲಕ್ಷಾಂತರ ಮೌಲ್ಯದ ಕರ್ಪೂರವನ್ನೂ ಬೆಳಗಿಸಲಾಗುತ್ತಿತ್ತು. ಆದರೆ ಈ ಬಾರಿ ಇದ್ಯಾವುದಕ್ಕು ಅವಕಾಶ ಇಲ್ಲದಿರುವುದು ಭಕ್ತರಿಗೆ ನಿರಾಸೆ ತಂದಿದೆ.