ಬೆಂಗಳೂರು: ರಾಜ್ಯದಲ್ಲಿಂದು 1,531 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 19 ಸಾವು ಆಗಿದೆ. ಮೂರು ತಿಂಗಳ ಬಳಿಕ ಮೊದಲ ಬಾರಿಗೆ 20ಕ್ಕಿಂತ ಕಡಿಮೆ ಸಾವಿನ ಪ್ರಕರಣಗಳು ದಾಖಲಾಗಿದ್ದು, ಮರಣ ಪ್ರಮಾಣ ಶೇ.1.24ಕ್ಕೆ ಇಳಿಕೆ ಕಂಡಿದೆ.
Advertisement
ಇಂದು 1,430 ಜನರು ಮಹಾಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ ರಾಜ್ಯದಲ್ಲಿ 22,569 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.03ರಷ್ಟಿದೆ. ಇದುವರೆಗೂ ರಾಜ್ಯದಲ್ಲಿ ಒಟ್ಟು 28,99,195 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 36,456 ಜನರನ್ನು ಕೊರೊನಾ ರಕ್ಕಸಿ ಬಲಿ ಪಡೆದುಕೊಂಡಿದೆ.
Advertisement
Advertisement
ಒಟ್ಟು 1,48,319 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಗದಗ, ಕೊಪ್ಪಳ ಮತ್ತು ರಾಮನಗರದಲ್ಲಿ ಇವತ್ತು ಕೊರೊನಾ ಪ್ರಕರಗಳು ದಾಖಲಾಗಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ 376 ಜನಕ್ಕೆ ಸೋಂಕು ತಗುಲಿದ್ದು, ಮೂವರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 8,176 ಸಕ್ರಿಯ ಪ್ರಕರಣಗಳಿವೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 7, ಬೆಳಗಾವಿ 24, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು ನಗರ 376, ಬೀದರ್ 2, ಚಾಮರಾಜನಗರ 29, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 51, ಚಿತ್ರದುರ್ಗ 18, ದಕ್ಷಿಣ ಕನ್ನಡ 337, ದಾವಣಗೆರೆ 15, ಧಾರವಾಡ 3, ಗದಗ 0, ಹಾಸನ 97, ಹಾವೇರಿ 2, ಕಲಬುರಗಿ 19, ಕೊಡಗು 78, ಕೋಲಾರ 9, ಕೊಪ್ಪಳ 0, ಮಂಡ್ಯ 38, ಮೈಸೂರು 93, ರಾಯಚೂರು 1, ರಾಮನಗರ 0, ಶಿವಮೊಗ್ಗ 86, ತುಮಕೂರು 39, ಉಡುಪಿ 109, ಉತ್ತರ ಕನ್ನಡ 57, ವಿಜಯಪುರ 4 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.