ಮುಂಬೈ: ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹ (Child Marriage), ಪ್ರೇಮ ವೈಫಲ್ಯ, ಲೈಂಗಿಕ ಹಿತಾಸಕ್ತಿ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹೆಣ್ಣುಮಕ್ಕಳು 18 ವರ್ಷ ತುಂಬುವ ಮೊದಲೇ ಗರ್ಭ ಧರಿಸುವ ಪ್ರಕರಣಗಳು ಕಂಡುಬರುತ್ತಿವೆ. ಈ ನಡುವೆ ಮಹಾರಾಷ್ಟ್ರದಲ್ಲಿ ಬಿಡುಗಡೆಯಾಗಿರುವ ವರದಿಯೊಂದು ಅಲ್ಲಿನ ಜನರನ್ನೇ ಬೆಚ್ಚಿ ಬೀಳಿಸಿದೆ.
ಹೌದು. ಬುಡಕಟ್ಟು ಸಮುದಾಯದ ಜನರೇ ಹೆಚ್ಚಿರುವ ಮಹಾರಾಷ್ಟ್ರದ (Maharashtra) 16 ಜಿಲ್ಲೆಗಳಲ್ಲಿ ಕಳೆದ 3 ವರ್ಷಗಳಲ್ಲಿ 15,253 ಹದಿಹರೆಯದ ಹೆಣ್ಣುಮಕ್ಕಳು 18 ವರ್ಷ ಆಗುವ ಮೊದಲೇ ತಾಯಂದಿರಾಗಿದ್ದಾರೆ (Teenage Mother) ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ (Mangal Prabhat Lodha) ತಿಳಿಸಿದ್ದಾರೆ. ಇದನ್ನೂ ಓದಿ: ಮರ್ಸಿಡಿಸ್ ಕಾರಿನಲ್ಲಿ ವೇಷ ಬದಲಿಸಿಕೊಂಡು ಮರೆಯಾದ ಅಮೃತಪಾಲ್ – ಕೊನೇ ಬಾರಿ ಕಾಣಿಸಿದ್ದು ಎಲ್ಲಿ?
Advertisement
Advertisement
ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಸಚಿವರು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 15 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು ಗರ್ಭಿಣಿಯರಾಗಿರುವುದು ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಇಲಾಖೆಯು ಮೂರು ಸದಸ್ಯರನ್ನು ಒಳಗೊಂಡ ಸಮತಿ ರಚಿಸಿತ್ತು. ಸಮಿತಿ ನಡೆಸಿದ ತನಿಖೆಯಲ್ಲಿ 15 ಸಾವಿರಕ್ಕೂ ಹೆಚ್ಚು ಬಾಲ್ಯವಿವಾಹಗಳು ನಡೆದಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವಾಣಿಜ್ಯ ವಾಹನಗಳ ಖರೀದಿದಾರರಿಗೆ Tata Motors ಶಾಕ್ – ಏಪ್ರಿಲ್ 1ರಿಂದ ಬೆಲೆ ಏರಿಕೆ
Advertisement
Advertisement
ಅಲ್ಲದೇ, 2019 ಮತ್ತು 2021ರ ಅವಧಿಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ 152 ಮೊಕದ್ದಮೆ ಹೂಡಿದ್ದು, 136 ಪ್ರಕರಣಗಳು ವಿಚಾರಣೆಯಲ್ಲಿವೆ ಎಂದು ಅವರು ತಿಳಿಸಿದ್ದರು. ಈ ಮಧ್ಯೆ ಸಭಾಧ್ಯಕ್ಷರು ಶೇ.10 ರಷ್ಟು ಬಾಲ್ಯ ವಿವಾಹವನ್ನಾದರೂ ತಡೆಯಲು ಸಾಧ್ಯವಿದೆಯೇ? ಎಂದು ಕೇಳಿದಾಗ, ಲಿಖಿತ ಉತ್ತರದಲ್ಲೇ ಭಾಗಶಃ ಆಗುತ್ತದೆ ಎಂದು ಉತ್ತರಿಸಿದ್ದಾರೆ.