ನವದೆಹಲಿ: ಕೊರೊನಾ ಸಮಯದಲ್ಲಿ ನಡೆಯಲಿರುವ ಎಲ್ಲ ಚುನಾವಣೆಗಳಲ್ಲಿ ಕೋವಿಡ್ 19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ.
ಈ ಸಂಬಂಧವಾಗಿ ಕೇಂದ್ರ ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ಮತ್ತು ಸರ್ಕಾರಿ ಅಧಿಕಾರಿಗಳು ಯಾವೆಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
Advertisement
Advertisement
ಮಾರ್ಗಸೂಚಿಯಲ್ಲಿ ಏನಿದೆ?
– 1500ರ ಬದಲು 1000 ಜನರಿಗೆ ಒಂದು ಮತಗಟ್ಟೆ
– ಮಾಸ್ಕ್ ಹಾಕದೇ ಮತ ಹಾಕಲು ಬಂದವರಿಗೆ ಮಾಸ್ಕ್ ನೀಡಬೇಕು
– ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕೋವಿಡ್ 19 ಜಾಗೃತಿ ಭಿತ್ತಿಪತ್ರ ಅಂಟಿಸಬೇಕು
– ಚುನಾವಣಾ ಸಿಬ್ಬಂದಿಯೂ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು
– ಪೋಲಿಂಗ್ ಏಜೆಂಟ್ ಹಾಗೂ ಕೌಂಟಿಂಗ್ ಏಜೆಂಟ್ ಉಷ್ಣಾಂಶ ಜಾಸ್ತಿಯಾದರೆ ಇವರನ್ನು ಬದಲಾಯಿಸಲು ಚುನಾವಣಾಧಿಕಾರಿಗೆ ಅಧಿಕಾರ
– ಮತದಾರ ಮಾಸ್ಕ್ ಜಾರಿಸಿ ತನ್ನ ಗುರುತು ತೋರಿಸಬೇಕು. ಇದನ್ನೂ ಓದಿ: ಉಪಚುನಾವಣೆ ಕದನ- ಆರ್.ಆರ್ ನಗರದಲ್ಲಿ ಮುನಿರತ್ನಗೆ ಟಿಕೆಟ್ ಖಚಿತ
Advertisement
Advertisement
– ಒಬ್ಬ ಚುನಾವಣಾಧಿಕಾರಿಯ ಮುಂದೆ ಓರ್ವ ಮತದಾರನಿಗೆ ಮಾತ್ರ ಅವಕಾಶ.
– ಎಲ್ಲ ಚುನಾವಣಾ ಅಧಿಕಾರಿಗಳಿಗೆ ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್, ಗ್ಲೌಸ್ ನೀಡಬೇಕು. ಅಗತ್ಯವಿದ್ದರೆ ಪಿಪಿಇ ಕಿಟ್ ನೀಡಬೇಕು.
– ಮನೆ ಮನೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇವಲ 5 ಜನರಿಗೆ ಮಾತ್ರ ಅವಕಾಶ.
– ಸಾರ್ವಜನಿಕ ಬಹಿರಂಗ ಭಾಷಣ ಪ್ರಚಾರಕ್ಕೆ ಸೀಮಿತ ಜನರಿಗೆ ಅವಕಾಶ.
– ಸಾರ್ವಜನಿಕ ಪ್ರಚಾರ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಪಾಡಲೇಬೇಕು.
– ಸಾರ್ವಜನಿಕ ಸಭೆ ಆಯೋಜಿಸುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯ ಜಾರಿಗೊಳಿಸಿರುವ ಕೋವಿಡ್ ನಿಯಮಾವಳಿಗಳ ಪಾಲನೆ ಕಡ್ಡಾಯ.
– ಚುನಾವಣಾ ಉದ್ದೇಶಕ್ಕೆ ಬಳಸುವ ಕಟ್ಟಡ/ಕೊಠಡಿ/ಹಾಲ್ನ ಪ್ರವೇಶದಲ್ಲಿ ಪ್ರತಿ ವ್ಯಕ್ತಿಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು. ಅಲ್ಲಿ ಸ್ಯಾನಿಟೈಸರ್, ಸೋಪ್ ಮತ್ತು ನೀರು ಲಭ್ಯವಾಗುವಂತೆ ಇರಬೇಕು.
– ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕನಿಷ್ಟ ವಾಹನಗಳ ಬಳಕೆ ಮಾಡತಕ್ಕದ್ದು.
– ಮತದಾನ ಕೇಂದ್ರದಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುವುದು ಕಡ್ಡಾಯ.
– ಮತಗಟ್ಟೆಗೆ ಬರುವಾಗ ಮತದಾರ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.
– ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಆನ್ಲೈನ್ ಮೂಲಕವೇ ನಾಮಪತ್ರ ಹಾಗೂ ಭದ್ರತಾ ಠೇವಣಿಯನ್ನು ಸಲ್ಲಿಸಬೇಕು.
– ರಾಜ್ಯ ಸರ್ಕಾರಗಳು ಮತಗಟ್ಟೆಗಳಿಗೆ ನೋಡಲ್ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡುವಂತೆ ಎಲ್ಲಾ ಜಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು.
-ಕ್ಯಾರಂಟೈನ್ಗೆ ಗುರಿಯಾದ ಕೋವಿಡ್-19 ರೋಗಿಗಳು ಕೂಡ ಮತದಾನ ಮಾಡಬಹುದಾಗಿದ್ದು, ಮತದಾನ ಅವಧಿಯ ಕೊನೆಯ ಒಂದು ಗಂಟೆ ಬಾಕಿ ಇದ್ದಾಗ ಮತಗಟ್ಟೆಗೆ ಬಂದು ಮತ ಚಲಾಯಿಸಬಹುದಾಗಿದೆ.
-ಆರೋಗ್ಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಕ್ವಾರಂಟೈನ್ಗೆ ಒಳಪಟ್ಟ ಸೋಂಕಿತ ಮತದಾರರು ಮತ ಚಲಾಯಿಸಬಹುದಾಗಿದೆ.
– ಕಂಟೈನ್ಮೆಂಟ್ ಝೋನ್ ಹಾಗೂ ಸೀಲ್ಡೌನ್ ಪ್ರದೇಶಗಳ ಮತದಾರರಿಗೆ ಪ್ರತ್ಯೇಕ ನಿಯಮಾವಳಿಗಳ ಜಾರಿ.