ಭೋಪಾಲ್: ಕೋತಿಯೊಂದರ ಅಂತ್ಯಕ್ರಿಯೆಗೆ ಸುಮಾರು 1,500ಕ್ಕೂ ಹೆಚ್ಚು ಜನರು ಸೇರಿ ಕೊರೊನಾ ನಿಯಮವನ್ನು ಉಲ್ಲಂಘನೆ ಮಾಡಿದ ಘಟನೆ ರಾಜ್‍ಗಢ್ ಜಿಲ್ಲೆಯ ದಲುಪುರ ಗ್ರಾಮದಲ್ಲಿ ನಡೆದಿದೆ.
ಹಲವು ಭಾಗಗಳಲ್ಲಿ, ಮಂಗಗಳನ್ನು ಭಗವಾನ್ ಹನುಮಾನ್ ಜೊತೆಗಿನ ಒಡನಾಟಕ್ಕಾಗಿ ಪವಿತ್ರವೆಂದು ಪರಿಗಣಿಸಲಾಗುತ್ತಿದೆ. ಡಿಸೆಂಬರ್ 29 ರಂದು ಕೋತಿಯೂ ಸಾವಿಗೀಡಾಗಿತ್ತು. ಇದರ ಸಾವಿನಿಂದ ನೊಂದ ರಾಜ್‍ಗಢ್ ಜಿಲ್ಲೆಯ ದಲುಪುರ ಗ್ರಾಮದ ನಿವಾಸಿಗಳು ಅಂತಿಮ ವಿಧಿಗಳನ್ನು ಆಯೋಜಿಸಿದ್ದರು.
Advertisement
The residents of Dalupura village in Rajgarh district first held the funeral rites of a langur that died of the cold on 29th December with the chanting of hymns, now hosted a mass feast for more then 1,500 people as part of funerary rituals. pic.twitter.com/aLSOPMqOG6
— Anurag Dwary (@Anurag_Dwary) January 11, 2022
Advertisement
ಶವಸಂಸ್ಕಾರದ ಸ್ಥಳಕ್ಕೆ ಜನರು ಕೋತಿಯ ಶವವನ್ನು ಕೊಂಡೊಯ್ಯುವಾಗ ಸ್ತೋತ್ರಗಳನ್ನು ಪಠಿಸುತ್ತ ಮೆರವಣಿಗೆ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಅಲ್ಲದೇ ಈ ವೇಳೆ ಹರಿ ಸಿಂಗ್ ಹಿಂದೂ ಸಂಪ್ರದಾಯದಂತೆ ತಲೆ ಬೋಳಿಸಿಕೊಂಡಿದ್ದಾನೆ. ಆದರೆ ಈ ಕೋತಿ ಸಾಕುಪ್ರಾಣಿಯೇನೂ ಆಗಿರಲಿಲ್ಲ. ಆದರೆ ಆಗಾಗ್ಗೆ ಹಳ್ಳಿಗೆ ಬರುತ್ತಿತ್ತು. ಇದನ್ನೂ ಓದಿ: ಜಿಎಸ್‍ಟಿ ನೋಟಿಸ್‌ನಲ್ಲಿ ಮೊತ್ತ ನೋಡಿ ಶಾಕ್ ಆದ ದಂಪತಿ!
Advertisement
कुछ लोगों ने मुंडन करवाया, चंदा करके हज़ारों लोग के लिये भोज का आयोजन किया अब धारा 144 के उल्लंघन में गांववालों पर मामला दर्ज हो गया है pic.twitter.com/yPq0lSkV2N
— Anurag Dwary (@Anurag_Dwary) January 11, 2022
Advertisement
ಗ್ರಾಮಸ್ಥರು ಒಟ್ಟಾಗಿ ಹಣ ಸಂಗ್ರಹಿಸಿ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಇಡೀ, ಗ್ರಾಮಕ್ಕೆ ವಿತರಿಸಿ ಗ್ರಾಮಸ್ಥರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. 1500ಕ್ಕೂ ಹೆಚ್ಚು ಜನರಿಗೆ ಔತಣಕೂಟ ಏರ್ಪಡಿಸಿದ್ದರು. ನೂರಾರು ಮಂದಿ ಬೃಹತ್ ಪೆಂಡಾಲ್ ಕೆಳಗೆ ಸಾಲಾಗಿ ಕುಳಿತು ಊಟ ಮಾಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿಯ ಬೀಗ ದೇಣಿಗೆ!