-ಶ್ರೀನಿವಾಸ್ ರಾವ್ ದಳವೆ
ಬೆಂಗಳೂರು: ವಿಶ್ವ ವಿದ್ಯಾಲಯದ ಕುಲಪತಿ ಪೋಸ್ಟ್ ಗೆ ಭಾರೀ ಡಿಮ್ಯಾಂಡ್ ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯದ ವಿಸಿ ಪೋಸ್ಟ್ ಗೆ ಯಾವ ಸಿಎಂ ಪೋಸ್ಟ್ ಗಿಂತಲೂ ಕಡಿಮೆ ಇಲ್ಲ ಅನ್ನುವಷ್ಟು ಮಟ್ಟಿಗೆ ಡಿಮ್ಯಾಂಡ್.
ಕುಲಪತಿಯಾಗಿದ್ದ ಪ್ರೊ.ತಿಮ್ಮೇಗೌಡರ ಅವಧಿ ಫೆಬ್ರವರಿ ಮೊದಲ ವಾರದಲ್ಲಿ ಮುಗಿದಿದೆ. ಈ ಹುದ್ದೆಗೆ ಈಗ ಹತ್ತಲ್ಲ ಇಪ್ಪತ್ತಲ್ಲ, ಬರೋಬ್ಬರಿ 150 ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ.
Advertisement
ಯಾಕಿಷ್ಟು ಅರ್ಜಿ ಸಲ್ಲಿಕೆ?: ಕಳೆದ ಜನವರಿಯಲ್ಲಿ ಉನ್ನತ ಶಿಕ್ಷಣ ಇಲಾಖೆ, ಖಾಲಿಯಾಗಲಿರುವ ಬೆಂಗಳೂರು ಹಾಗೂ ಮೈಸೂರು ವಿವಿಗಳ ಕುಲಪತಿ ಹುದ್ದೆಗಾಗಿ ಜಾಹೀರಾತು ನೀಡಿತ್ತು. ಹೀಗಾಗಿ ಇಷ್ಟೊಂದು ಅರ್ಜಿಗಳು ಸಲ್ಲಿಕೆಯಾಗಿವೆ.
Advertisement
ಯಾಕಿಷ್ಟು ಡಿಮ್ಯಾಂಡ್!: ಬೆಂಗಳೂರು ಹೇಳಿ ಕೇಳಿ ಹೈಟೆಕ್ ಸಿಟಿ, ಯಾವುದಕ್ಕೂ ಕೊರತೆ ಇಲ್ಲ. ಹೀಗಾಗಿ ಹೆಚ್ಚು ಜನ ಇಲ್ಲೆ ಕುಲಪತಿ ಆಗಬೇಕು ಅಂತ ಇಚ್ಛಿಸುತ್ತಾರೆ. ಇದಲ್ಲದೆ ಅತೀ ಹೆಚ್ಚು ಕಾಲೇಜುಗಳು ಬೆಂಗಳೂರು ವಿವಿ ಕೆಳಗೆ ಬರುತ್ತವೆ. ಮಾತ್ರವಲ್ಲ ಸರ್ಕಾರದಿಂದ ಹೆಚ್ಚು ಅನುದಾನ ಬರುತ್ತೆ. ಇಷ್ಟೆಲ್ಲದರ ಜೊತೆ ನೆಮ್ಮದಿಯ ಜೀವನ ಸಿಗುತ್ತೆ. ಹೀಗಾಗಿ ಎಲ್ರಿಗೂ ಬೆಂಗಳೂರು ವಿವಿನೇ ಬೇಕು.
Advertisement
ಆಯ್ಕೆ ಹೇಗೆ?: ಸದ್ಯ ಆಕಾಂಕ್ಷಿಗಳು ಏನೋ ಅರ್ಜಿ ಸಲ್ಲಿಸಿದ್ದಾರೆ. ವಿಸಿ ನೇಮಕ ಸಂಬಂಧ ಸರ್ಚ್ ಕಮಿಟಿಯನ್ನು ರಚಿಸಲಾಗಿದೆ. ಈ ಕಮಿಟಿ ಸದಸ್ಯರು 150 ಆಕಾಂಕ್ಷಿಗಳ ವಿವರ ನೋಡಿ ಅಂತಿಮವಾಗಿ ಮೂವರ ಹೆಸರು ಫೈನಲ್ ಮಾಡಬೇಕು.