ಮುಂಬೈ: ಭಾರತೀಯ ಕ್ರಿಕೆಟ್ ಲೋಕ ಎಂದೂ ನೆನಪಿಟ್ಟುಕೊಳ್ಳುವ ಸ್ಟಾರ್ ಬ್ಯಾಟರ್ ಅಂದ್ರೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ (Rohit Sharma). ಇನ್ನೂ ಕೆಲ ವರ್ಷಗಳವರೆಗೆ ಟಾಪ್-10 ಕ್ರಿಕೆಟಿಗರ ಪಟ್ಟಿಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಹೆಸರೆಂದರೇ ಅದೂ ರೋಹಿತ್ ಶರ್ಮಾ. ಅವರೀಗ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
Poetry, Ultra 𝐑𝐨 Max 💙 pic.twitter.com/YYgvYcHMi8
— Mumbai Indians (@mipaltan) April 10, 2026
ಹೌದು. 2011 ರಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸೇರಿದ ರೋಹಿತ್ ಶರ್ಮಾ ಅವರು ಇಂದಿಗೆ 15 ವರ್ಷ ಪೂರೈಸಿದ್ದಾರೆ. ಈ ಮೂಲಕ 15 ಋತುಗಳಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಪರ ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಪ್ರಯುಕ್ತ ಫ್ರಾಂಚೈಸಿ ವಿಶೇಷ ವಿಡಿಯೋವೊಂದನ್ನ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ.

5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ಸಾಧನೆ
ಸರಿಯಾಗಿ 15 ವರ್ಷಗಳ ಹಿಂದೆ ಇದೇ ದಿನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸೇರಿಕೊಂಡ ರೋಹಿತ್ ಶರ್ಮಾ ತಂಡಕ್ಕೆ ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ನಾಯಕನಾಗಿ ತಂಡವನ್ನ ಮುನ್ನಡೆಸಿ 5 ಬಾರಿ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ (IPL Trophy) ತಂದುಕೊಟ್ಟಿದ್ದಾರೆ. ನಾಯಕನಾಗಿ ಒಂದು ಬಾರಿ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.
ಅಷ್ಟೇ ಅಲ್ಲ ನಾಯಕನಾಗಿ 87 ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದು, ಮುಂಬೈ ಇಂಡಿಯನ್ಸ್ ಪರ ಅತಿಹೆಚ್ಚು ಪಂದ್ಯಗಳನ್ನ ಗೆಲ್ಲಿಸಿದ ಸಾಧನೆ ಮಾಡಿದ್ದಾರೆ. ಐಪಿಎಲ್‌ನಲ್ಲಿ 100% ಮ್ಯಾಚ್ ವಿನ್ನಿಂಗ್, ಮುಂಬೈ ಇಂಡಿಯನ್ಸ್ ಪರ ಅತಿಹೆಚ್ಚು ರನ್ ಮತ್ತು ಅತಿಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ ಇರೋದು ಸಹ ಹಿಟ್‌ಮ್ಯಾನ್ ಹೆಸರಿನಲ್ಲೇ.

ಸದ್ಯ ಕಳೆದ ಮೂರು ಆವೃತ್ತಿಗಳಿಂದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನ ಮುನ್ನಡೆಸುತ್ತಿದ್ದು, ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಾರೆ.

