ನವದೆಹಲಿ: 15 ವರ್ಷದ ಟೀಂ ಇಂಡಿಯಾ ಮಹಿಳಾ ತಂಡದ ಯುವ ಆಟಗಾರ್ತಿ ಶಫಾಲಿ ವರ್ಮಾ, ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರ 30 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದು, ಭಾರತದ ಪರ ಅರ್ಧ ಶತಕ ದಾಖಲಿಸಿದ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
ಸಚಿನ್ 16 ವರ್ಷ 214 ದಿನಗಳ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮೊದಲ ಅರ್ಧ ಶತಕ ಗಳಿಸಿದ್ದರು. ಸದ್ಯ ಶಫಾಲಿ 15 ವರ್ಷ 285 ದಿನಗಳ ವಯಸ್ಸಿನಲ್ಲಿ ಅರ್ಧ ಶತಕ ಗಳಿಸಿದ್ದಾರೆ.
Advertisement
Advertisement
ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಶಫಾಲಿ ಈ ಸಾಧನೆ ಮಾಡಿದ್ದು, ಪಂದ್ಯದಲ್ಲಿ 49 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಗಳ ನೆರವಿನಿಂದ 73 ರನ್ ಗಳಿಸಿ ಮಿಂಚಿದರು. ಅಂದಹಾಗೇ ಶಫಾಲಿ ಅವರಿಗೆ ಇದು 5ನೇ ಅಂತರಾಷ್ಟ್ರೀಯ ಟಿ20 ಪಂದ್ಯವಾಗಿದ್ದು, ಮೊದಲ ಅರ್ಧ ಶತಕ ಗಳಿಸಿದ್ದಾರೆ.
Advertisement
ಹರ್ಯಾಣದ ಶಫಾಲಿ ವರ್ಮಾ ಅವರು ಪಂದ್ಯದಲ್ಲಿ ಮೊದಲ ವಿಕೆಟ್‍ಗೆ ಸ್ಮೃತಿ ಮಂದಾನ ಅವರೊಂದಿಗೆ 143 ರನ್ ಗಳ ಜೊತೆಯಾಟ ನೀಡಿದ್ದು, ಭಾರತ ಪರ ಮಹಿಳಾ ಟಿ20 ಇತಿಹಾಸದಲ್ಲಿ ಮೊದಲ ವಿಕೆಟ್‍ಗೆ ದಾಖಲಾದ ಅತ್ಯಧಿಕ ರನ್ ಜೊತೆಯಾಟ ಇದಾಗಿದೆ. ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ತಂಡಕ್ಕೆ 185 ರನ್ ಗಳ ಬೃಹತ್ ಮೊತ್ತದ ಸವಾಲವನ್ನು ನೀಡಿತ್ತು.
Advertisement
The explosive 15-year-old Shafali Verma scored her maiden half-century in the first T20I against West Indies Women today in St Lucia. Shafali is the youngest Indian ever to score an int'l fifty???????????????? #TeamIndia pic.twitter.com/O2MfVdNBOv
— BCCI Women (@BCCIWomen) November 10, 2019
ಬೃಹತ್ ಮೊತ್ತವನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ 9 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿ ಸೋಲುಂಡಿತು. 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಅಂದಹಾಗೇ ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಶಫಾಲಿ 46 ರನ್ ಗಳಿಸಿದ್ದರು.
???? Shafali Verma ➝ 73 (49)
???? Smriti Mandhana ➝ 67 (46)
The duo's record-breaking partnership set up an 84-run win for India in the first T20I against West Indies. #WIvIND REPORT ????https://t.co/RZcFltOl9G
— ICC (@ICC) November 10, 2019