ನವದೆಹಲಿ: 15 ವರ್ಷದ ಭಾರತೀಯ ಹುಡುಗ ಕೇವಲ 2 ವಾರಗಳಲ್ಲಿ ಉಕ್ರೇನಿಯನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ರಚಿಸಿದ್ದಾನೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಸುದ್ದಿ ವೈರಲ್ ಆಗಿದೆ. ಹುಡುಗನ ಸಾಧನೆಗೆ ನೆಟ್ಟಿಗರು ಪ್ರೋತ್ಸಾಹದ ಮಾತುಗಳಾಡಿದ್ದಾರೆ.
Advertisement
ರಷ್ಯಾ, ಉಕ್ರೇನ್ ಮೇಲೆ ದಾಳಿಯನ್ನು ಆರಂಭಿಸಿದಾಗಿನಿಂದ, ಜಗತ್ತು ಉಕ್ರೇನ್‍ಗೆ ಸಹಾಯ ಮಾಡಲು ಒಗ್ಗಟ್ಟಿನಿಂದ ನಿಂತಿದೆ. ಉಕ್ರೇನ್‍ಗೆ ದೇಣಿಗೆ ಸಂಗ್ರಹಿಸಲು ಅನೇಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಒಗ್ಗೂಡಿವೆ. ಯುದ್ಧದ ಪರಿಣಾಮವಾಗಿ, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದು, ಅವರಿಗೆ ಇತರ ದೇಶಗಳಲ್ಲಿ ಆಶ್ರಯ ಪಡೆಯಬೇಕಾಗಿದೆ. ಇದನ್ನೂ ಓದಿ: ಹೆಣ್ಣು ಮಗು ಜನಿಸಿದ್ದಕ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ತಂದೆ
Advertisement
Launching Refuge – To help those displaced from their homes in Ukraine
Refuge is where individuals offering help connect with those who require help.
???? Please Retweet to spread the word
Download for Android now: https://t.co/qjerMUgIn2 pic.twitter.com/ZGHRMYrtrf
— Tejas (@suptejas) March 31, 2022
Advertisement
ಯುದ್ಧದಿಂದ ನೋವನ್ನು ಅನುಭವಿಸುತ್ತಿರುವ ನಿರಾಶ್ರಿತರಿಗೆ 15 ವರ್ಷದ ಭಾರತೀಯ ಹುಡುಗ ಇದೀಗ ಬೇರೆ ದೇಶದಲ್ಲಿರುವ ಉಕ್ರೇನಿಯನ್ ನಿರಾಶ್ರಿತರನ್ನು ಸಂಪರ್ಕಿಸಲು ವಿಶೇಷ ಮಾರ್ಗವೊಂದನ್ನು ಹುಡುಕಿದ್ದಾನೆ. ಈ ಪೂರಾ ಉಕ್ರೇನಿಯನ್ ನಿರಾಶ್ರಿತರಿಗಾಗಿ ವಿಶೇಷ ಅಪ್ಲಿಕೇಶನ್ ನಿರ್ಮಿಸಿದ್ದಾನೆ. ಇದರಲ್ಲಿರುವ ವಿಶೇಷ ವಿಷಯವೆಂದರೆ ತೇಜಸ್ ರವಿಶಂಕರ್ ಎಂದು ಗುರುತಿಸಲಾದ ಚಿಕ್ಕ ಹುಡುಗ ಸಿಕ್ವೊಯಾ ಇಂಡಿಯಾದ ವ್ಯವಸ್ಥಾಪಕ, ನಿರ್ದೇಶಕ ಜಿವಿ ರವಿಶಂಕರ್ ಅವರ ಮಗ. ಸಾಫ್ಟ್‍ವೇರ್ ಡೆವಲಪರ್ ಆಗಿರುವ ತೇಜಸ್ ಕೇವಲ ಎರಡು ವಾರಗಳಲ್ಲಿ ಆ್ಯಪ್ ಕಂಡುಹಿಡಿದಿದ್ದಾನೆ.
Advertisement
ತೇಜಸ್ ಆ್ಯಪ್ ಲಿಂಕ್‍ನನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಇದನ್ನು ಹೇಗೆ ಬಳಸಬೇಕು ಎಂಬುದನ್ನು ವಿವರಿಸಿದ್ದಾನೆ. ಈ ಆ್ಯಪ್‍ನಲ್ಲಿ ಹಲವು ವಿಶೇಷತೆಗಳನ್ನು ಹೊಂದಿದೆ. ಉಕ್ರೇನ್ ನಿರಾಶ್ರಿತರಿಗೆ ಹತ್ತಿರವಿರುವ ಜಾಗದ ಜೊತೆಗೆ ಪ್ರಪಂಚದ ನಕ್ಷೆಯನ್ನು ತೇಜಸ್ ಆ್ಯಪ್‍ನಲ್ಲಿ ಆಳವಡಿಸಿದ್ದಾರೆ. ಈ ಮೂಲಕ ನಿರಾಶ್ರಿತರು ಆಹಾರ, ಉಳಿದುಕೊಳ್ಳಲು ಸುರಕ್ಷಿತ ಸ್ಥಳಗಳು ಮತ್ತು ಪ್ರಪಂಚದಾದ್ಯಂತ ಔಷಧಿಗಳಂತಹ ಅವಶ್ಯಕತೆಗಳನ್ನು ಪೂರೈಸಲು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: ಮನೆಯನ್ನೇ ಸ್ಮಶಾನ ಮಾಡಿದ ಪಾಪಿ – ಪತ್ನಿ, ಅಜ್ಜಿ, ತನ್ನ ಎರಡು ಮಕ್ಕಳನ್ನೆ ಕ್ರೂರವಾಗಿ ಕೊಂದ
ಸಹಾಯ ಅಗತ್ಯವಿರುವ ವ್ಯಕ್ತಿ ಕೇವಲ ಆ್ಯಪ್ ಮೇಲೆ ಎರಡು ಕ್ಲಿಕ್ ಮಾಡಿದರೆ ಸಹಾಯ ಪಡೆಯಬಹುದು ಎಂದು ತೇಜಸ್ ತಮ್ಮ ಟ್ವೀಟ್‍ನಲ್ಲಿ ಬರೆದಿದ್ದಾರೆ. ಈ ಅಪ್ಲಿಕೇಶನ್ ಇಂಗ್ಲಿಷ್ ಜೊತೆಗೆ 12 ಇತರ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ತೇಜಸ್ ತಂದೆ ಜಿವಿ ರವಿಶಂಕರ್ ಅವರು ತಮ್ಮ ಮಗನ ಸಾಧನೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಮಗನ ಯಶಸ್ಸನ್ನು ಶ್ಲಾಘಿಸಿದ್ದಾರೆ. ಕೆಲವು ದಿನಗಳ ಹಿಂದೆ, ತೇಜಸ್ ತನ್ನ ಅಪ್ಲಿಕೇಶನ್ ಅನುಮೋದಿಸಲು ಗೂಗಲ್ ಪ್ಲೇಗೆ ಮನವಿ ಮಾಡಿದ್ದನು.