CrimeLatestMain PostNational

ಶಾಲೆಯಿಂದ ಹೊರಹಾಕಿದ್ದಕ್ಕೆ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲ್ಲಲು ಯತ್ನಿಸಿದ ಬಾಲಕ!

ಜೈಪುರ್: ಶಾಲೆಯಿಂದ ಹೊರ ಹಾಕಿದ್ದಕ್ಕೆ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲ್ಲಲು ಯತ್ನಿಸಿದ 15 ವರ್ಷ ವಯಸ್ಸಿನ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ರಾಜಸ್ಥಾನ್‌ನಲ್ಲಿ ನಡೆದಿದೆ.

ಒಂದು ವರ್ಷದ ಹಿಂದೆ ಆರೋಪಿ ಬಾಲಕ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ನಂತರ ಈತನನ್ನು ಶಾಲೆಯಿಂದ ಹೊರ ಹಾಕಲಾಗಿತ್ತು. ಅದಾದ ಬಳಿಕ ಈ ಬಾಲಕ ನಿತ್ಯ ಶಾಲೆಯಿಂದ ತನ್ನ ಸಂಬಂಧಿ ಹುಡುಗನನ್ನು ಕರೆದುಕೊಂಡು ಹೋಗಲು ಬರುತ್ತಿದ್ದ. ಈ ವೇಳೆ ಪ್ರಾಂಶುಪಾಲ ಭಗವಾನ್‌ ತ್ಯಾಗಿ ಅವರ ಕೊಠಡಿಗೆ ಹಲವು ಬಾರಿ ಭೇಟಿ ನೀಡಿದ್ದಾನೆ ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಮಗನನ್ನು ಹತ್ಯೆಗೈದು ತಾಯಿ ಆತ್ಮಹತ್ಯೆ

ಒಮ್ಮೆ ಪ್ರಾಂಶುಪಾಲರ ಕೊಠಡಿಗೆ ಹೋಗಿ ಗನ್‌ನಿಂದ ಶೂಟ್‌ ಮಾಡಿ ಅವರನ್ನು ಕೊಲ್ಲಲು ಯತ್ನಿಸಿದ್ದಾನೆ. ಆದರೆ ಗನ್‌ನಿಂದ ಗುಂಡು ಹಾರಿಲ್ಲ. ಈ ವೇಳೆ ಶಾಲಾ ಸಿಬ್ಬಂದಿ ಬಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

POLICE JEEP

ಬಾಲ ನ್ಯಾಯ ಕಾಯ್ದೆಯಡಿ ಬಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಫೋನ್‍ನಲ್ಲಿ ಆಧಾರ್ ಕಾರ್ಡ್ ಡೌನ್‍ಲೋಡ್ ಮಾಡುವುದು ಹೇಗೆ?

Leave a Reply

Your email address will not be published.

Back to top button